ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿ ನಿರ್ಮಿಸಿದ ಪಾರ್ಶ್ವವಾಯು ಪೀಡಿತ; ವಿಡಿಯೋ ವೈರಲ್

ವಿಶ್ವದ ಅತಿದೊಡ್ಡ ಜಿಪಿಎಸ್ ಕಲಾಕೃತಿಯನ್ನು ನಿರ್ಮಿಸಲು ದುಬೈನ ಬೀದಿಗಳಲ್ಲಿ ಗಾಲಿಕುರ್ಚಿಯ ಮೇಲೆ ವ್ಯಕ್ತಿಯೊಬ್ಬರು ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಇದು ಗಿನ್ನೆಸ್‌ ದಾಖಲೆ ಪುಟ ಸೇರಿದೆ. ವ್ಹೀಲ್‌ಚೇರ್-ಬೌಂಡ್ ಲೋಗೋವನ್ನು ಪೇಂಟಿಂಗ್ ಮಾಡುವಾಗ ಅವರು ಬುರ್ಜ್ ಖಲೀಫಾ ಮತ್ತು ದುಬೈ ಮಾಲ್ ಅನ್ನು ದಾಟುವುದನ್ನು ವಿಡಿಯೋದಲ್ಲಿ ನೋಡಬಹುದು.

ಕೇರಳದ ಕಲಾವಿದರಾದ ಸುಜಿತ್ ವರ್ಗೀಸ್ ಅವರು ಈ ದಾಖಲೆ ಮಾಡಿದ್ದಾರೆ. ರೇಖಾಚಿತ್ರವು 8.71 ಕಿಲೋಮೀಟರ್ (5.41 ಮೈಲುಗಳು) ದೂರವನ್ನು ಒಳಗೊಂಡಿದೆ ಮತ್ತು ಇದು ಪೂರ್ಣಗೊಳ್ಳಲು 24 ಗಂಟೆಗಳನ್ನು ತೆಗೆದುಕೊಂಡಿದೆ.

2013 ರಲ್ಲಿ ಬೈಕ್ ಅಪಘಾತದ ನಂತರ ಪಾರ್ಶ್ವವಾಯುವಿಗೆ ಒಳಗಾದ ಸುಜಿತ್, ಕಲೆಯ ಮೇಲೆ ಪ್ರೀತಿ ಬೆಳೆಸಿಕೊಂಡರು. ಅವರು ತಮ್ಮ ಗಾಲಿಕುರ್ಚಿ ಮತ್ತು GPS ಟ್ರ್ಯಾಕರ್ ಬಳಸಿ ಇಂಥದ್ದೊಂದು ಅಚ್ಚರಿ ಸಾಧಿಸಿದ್ದಾರೆ. ದುಬೈ ಪೊಲೀಸ್ ಜನರಲ್ ಕಮಾಂಡ್ ಸುಜಿತ್ ವರ್ಗೀಸ್ ಅವರ ದಾಖಲೆ ಮಾಡುವ ಸಾಧನೆಯಲ್ಲಿ ಬೆಂಬಲಿಸಿದರು.

https://youtu.be/oa-gSJB-8q0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read