ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದ ಕೇರಳ ಸಚಿವರ ಬೆಂಗಾವಲು ವಾಹನ; ಬೆಚ್ಚಿ ಬೀಳಿಸುತ್ತೆ ಸಿಸಿ ಕ್ಯಾಮೆರಾ ದೃಶ್ಯ

ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರ ಬೆಂಗಾವಲು ವಾಹನ ಆಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಸಚಿವರ ಬೆಂಗಾವಲಿಗಿದ್ದ ಪೊಲೀಸ್ ಜೀಪು ಕೊಟ್ಟಾರಕ್ಕರದ ಪುಲಮಾನ್ ಜಂಕ್ಷನ್‌ನಲ್ಲಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಸಚಿವರ ಬೆಂಗಾವಲು ಪಡೆ ಸಾಗಲು ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಆಂಬುಲೆನ್ಸ್ ಸಾಗ್ತಿದ್ದಾಗ ಪೊಲೀಸ್ ಜೀಪ್ ಡಿಕ್ಕಿ ಹೊಡೆಯಿತು. ಪರಿಣಾಮ ಆಂಬುಲೆನ್ಸ್ ರಸ್ತೆಯ ಮೇಲೆ ಪಲ್ಟಿಯಾಯಿತು.

ಅಪಘಾತದ ಸಿಸಿ ಕ್ಯಾಮೆರಾ ದೃಶ್ಯ ವೈರಲ್ ಆಗಿದ್ದು ಆಂಬ್ಯುಲೆನ್ಸ್ ಮುಂದಕ್ಕೆ ಚಲಿಸುತ್ತಿದ್ದ ವೇಳೆಯೇ ಮತ್ತೊಂದು ದಾರಿಯಲ್ಲಿ ಬರ್ತಿದ್ದ ಬೆಂಗಾವಲು ವಾಹನ ಎದುರಿನಿಂದ ಡಿಕ್ಕಿ ಹೊಡೆದಿದೆ.

ಇದರಿಂದ ಆಂಬುಲೆನ್ಸ್ ಪಲ್ಟಿಯಾದರೆ, ರಸ್ತೆಯಲ್ಲಿ ನಿಂತಿದ್ದ ಬೈಕ್ ಗೆ ಹಾನಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಸಚಿವರು ವಾಹನದಿಂದ ಕೆಳಗಿಳಿದು ಗಾಯಾಳುಗಳ ಸ್ಥಿತಿ ವಿಚಾರಿಸಿದ ಬಳಿಕ ಸ್ಥಳದಿಂದ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ.

https://twitter.com/RealBharatB/status/1679379529796575233?ref_src=twsrc%5Etfw%7Ctwcamp%5Etweetembed%7Ctwterm%5E1679379529796575233%7Ctwgr%5E2215ed4e6fdaa6c561f47a6cba9aabc00abc3d91%7Ctwcon%5Es1_&ref_url=https%3A%2F%2Fwww.freepressjournal.in%2Findia%2Fkerala-accident-video-ambulance-turns-turtle-after-minister-sivankuttys-convoy-vehicle-rams-into-it-in-kollam-3-injured

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read