ವಾಹನದಲ್ಲಿ ಪಾಸಿಟಿವ್ ಶಕ್ತಿ ಇರುವ ಈ ವಸ್ತು ಇಡುವುದರಿಂದ ತಪ್ಪುತ್ತೆ ಅವಘಡ

ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್ ಗೆ ಮಹತ್ವದ ಸ್ಥಾನವಿದೆ. ಪಿರಾಮಿಡ್ ಶಕ್ತಿ ಕೇಂದ್ರ. ಇದು ತನ್ನ ಬಳಿಯಿರುವ ಗಾಳಿಯನ್ನು ಶುದ್ಧಗೊಳಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಹಾಗೂ ಕಾರಿನಲ್ಲಿ ಪಿರಾಮಿಡ್ ಇರಬೇಕು.

ಪಿರಾಮಿಡ್ ಸಕಾರಾತ್ಮಕ ಶಕ್ತಿ ಕೇಂದ್ರ. ಕಾರು ಅಥವಾ ಯಾವುದೇ ವಾಹನದಲ್ಲಿ ಇದನ್ನು ಇಡುವುದ್ರಿಂದ ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ. ಅಪಘಾತದ ಸಂದರ್ಭದಲ್ಲಿ ಚಾಲಕನಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಇದು ಸಹಕಾರಿಯಾಗುತ್ತದೆ. ಪಿರಾಮಿಡ್ ನಿಂದ ಬರುವ ಪಾಸಿಟಿವ್ ಶಕ್ತಿ, ಚಾಲಕನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅಪಘಾತವನ್ನು ತಡೆಯಲು ಪಿರಾಮಿಡ್ ನೆರವಾಗುತ್ತದೆ.

ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಿಸಲು ಮಡಿಕೆಯಲ್ಲಿ ಅಕ್ಕಿ ಹಾಕಿ ಅದ್ರ ಮೇಲೆ ಪಿರಾಮಿಡ್ ಇಡಿ. ನಂತ್ರ ಗಣಪತಿ ಮಂತ್ರವನ್ನು ಜಪಿಸಿ. ಬಳಿಕ ಅಕ್ಕಿಯ ಪಾಯಸ ಮಾಡಿ. ಈ ಅಕ್ಕಿಯ ಪಾಯಸ ತಿನ್ನುವುದ್ರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.

ಯಾವುದಾದ್ರೂ ಪಾತ್ರೆ ನೀರು ಹಾಕಿ ಪಿರಾಮಿಡ್ ಇಡಿ. ನಂತ್ರ ಆ ನೀರಿನಿಂದ ಕಣ್ಣು ಹಾಗೂ ಮುಖವನ್ನು ತೊಳೆಯಿರಿ. ಮುಖ ಹೊಳಪು ಪಡೆಯುವ ಜೊತೆಗೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ.

ವ್ಯಾಪಾರದ ವೃದ್ಧಿಗಾಗಿ ವ್ಯಾಪಾರಿ ಸ್ಥಳದಲ್ಲಿ ಪಿರಾಮಿಡ್ ಇಡಿ. ನಂತ್ರ ತಾಯಿ ಲಕ್ಷ್ಮಿ ಮಂತ್ರ ಜಪಿಸಿ ಪೂಜೆ ಮಾಡಿ. ನಿಮ್ಮ ವ್ಯಾಪಾರ ವೃದ್ಧಿಗೆ ಇದು ನೆರವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read