ʼಸಪ್ತಾಶ್ವʼ ಫೋಟೋ ಖರೀದಿ ಮಾಡುವ ಮುನ್ನ ನೆನಪಿನಲ್ಲಿಡಿ ಈ ವಿಷಯ….!

ಸಪ್ತ ಅಶ್ವಗಳಿಗೆ ವಾಸ್ತು ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಓಡುತ್ತಿರುವ ಸಪ್ತ ಅಶ್ವವು ಅಭಿವೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತ ಎಂದು ಭಾವಿಸಲಾಗುತ್ತದೆ. ಅನೇಕ ಬಣ್ಣಗಳಲ್ಲಿ ಸಪ್ತ ಅಶ್ವಗಳ ಫೋಟೋ ನಿಮಗೆ ಸಿಗಬಹುದು. ಆದರೆ ಎಲ್ಲದಕ್ಕಿಂತ ಬಿಳಿ ಬಣ್ಣದ ಅಶ್ವಗಳ ಫೋಟೋವು ಹೆಚ್ಚು ಒಳ್ಳೆಯದು. ಕುದುರೆಯು ಶಕ್ತಿಯ ಸಂಕೇತವಾಗಿದ್ದರೆ ಬಿಳಿ ಬಣ್ಣವು ಶಾಂತಿ ಹಾಗೂ ಶುದ್ಧದ ಸಂಕೇತವಾಗಿದೆ.

ಈ ಫೋಟೋ ಅಳವಡಿಸೋದ್ರಿಂದ ಮನಸ್ಸು ಶುದ್ಧವಾಗಿರಲಿದೆ. ಅಲ್ಲದೇ ಆಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ. ಹೀಗಾಗಿ ಶ್ವೇತ ವರ್ಣದ ಅಶ್ವಗಳ ಫೋಟೋವು ಶ್ರೇಷ್ಟ ಎಂದು ಹೇಳಲಾಗುತ್ತದೆ.

ಇದು ಮಾತ್ರವಲ್ಲದೇ ನೀವು ಇನ್ನೂ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿ ಇಡಬೇಕು. ಬೇರೆ ಬೇರೆ ದಿಕ್ಕಿನ ಕಡೆಗೆ ಮುಖ ಮಾಡಿರುವ ಅಶ್ವಗಳ ಫೋಟೋವನ್ನು ಖರೀದಿ ಮಾಡಬೇಡಿ. ಪ್ರತಿಯೊಂದು ಅಶ್ವವು ಮುಂಭಾಗ ಮುಖ ಮಾಡಿ ಓಡುವಂತಿರಬೇಕು. ಕುದುರೆಗಳಿಗೆ ಲಗಾಮನ್ನು ಹಾಕಿದ ರೀತಿಯಲ್ಲಿ ಚಿತ್ರ ಇರಬಾರದು. ಈ ಫೋಟೋಗಳನ್ನು ನೀವು ಗೋಡೆಯಲ್ಲಿ ನೇತು ಹಾಕೋದು ಮಾತ್ರವಲ್ಲ. ಕಚೇರಿಯಲ್ಲಿ ನಿಮ್ಮ ಡೆಸ್ಕ್​ಟಾಪ್​ ಪರದೆಯ ಮೇಲೂ ಹಾಕಿಕೊಳ್ಳಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read