ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕೋರ್ಸ್‍ಗಳಿಗಾಗಿ ಆರ್ಜಿ ಆಹ್ವಾನ

ಧಾರವಾಡ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯ್ದೆ 2009ರ ಕಲಂ 58ರ ಅಡಿಯನ್ವಯ ಕರ್ನಾಟಕ ರಾಜ್ಯದಲ್ಲಿ 2023-24ರ ಶೈಕ್ಷಣಿಕ ವರ್ಷಕ್ಕೆ 3 ವರ್ಷದ ಎಲ್.ಎಲ್.ಬಿ., 5 ವರ್ಷದ ಬಿ.ಎ.,ಎಲ್.ಎಲ್.ಬಿ., 5 ವರ್ಷದ ಬಿ.ಬಿ.ಎ.,ಎಲ್‍ಎಲ್.ಬಿ., 5 ವರ್ಷದ ಬಿ.ಕಾಂ.,ಎಲ್.ಎಲ್.ಬಿ., 2 ವರ್ಷದ ಎಲ್.ಎಲ್.ಎಂ., ಅಧ್ಯಯನ ಕೇಂದ್ರ, ಡಿಪ್ಲೋಮಾ ಹಾಗೂ ಸರ್ಟಿಫೀಕೇಟ ಕೋರ್ಸ್‍ಗಳಿಗೆ ಹೊಸ, ನವೀಕರಣ, ವಿಸ್ತರಣೆ, ಶಾಶ್ವತ ಹಾಗೂ ಶಾಶ್ವತ ನವೀಕರಣ ಸಂಯೋಜನೆಗಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ಬವಿದ್ಯಾಲಯವು, ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳು ಕುಲಸಚಿವರ ಕಛೇರಿ, ಕರ್ನಾಟಕ ರಾಜ್ಯ ಕಾನೂನು ವಿಶ್ಬವಿದ್ಯಾಲಯ, ನವನಗರ, ಹುಬ್ಬಳ್ಳಿ-580025 ಯಲ್ಲಿ ದೊರೆಯುತ್ತವೆ ಹಾಗೂ ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಸಹ ಡೌನಲೋಡ್ ಮಾಡಿಕೊಳ್ಳಬಹುದು. ಅರ್ಜಿಯನ್ನು ಡಿಸೆಂಬರ್ 11 ರೊಳಗಾಗಿ, ದಂಡ ಸಹಿತ ಡಿಸೆಂಬರ್ 16 ರೊಳಗಾಗಿ ಸಲ್ಲಿಸಬೇಕು. ಪ್ರತಿ ಅರ್ಜಿಗಳಿಗೆ ರೂ. 2,000/-ಗಳ ಹಾಗೂ ಸರ್ಟಿಫೀಕೇಟ ಕೋರ್ಸಗಳಿಗೆ 1,000/-ಗಳ  ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ಬವಿದ್ಯಾಲಯದ ವೆಬ್‍ಸೈಟ್ www.kslu.karnataka.gov.in ನೋಡಬಹುದು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read