ಇಳಿಯದ ʼಟೊಮ್ಯಾಟೋʼ ದರ: ಪರ್ಯಾಯ ಮಾರ್ಗ ಕಂಡುಕೊಂಡ ರಾಜ್ಯದ ಜನ…!

ಸದ್ಯ ಟೊಮ್ಯಾಟೋ ಬೆಲೆ ಕೆಜಿಗೆ 120 ರೂಪಾಯಿ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನೇಕರು ಅಡುಗೆಗಳಲ್ಲಿ ಟೊಮ್ಯಾಟೋ ಬಳಕೆ ಮಾಡೋದನ್ನೆ ಬಿಟ್ಟಿದ್ದಾರೆ. ಇದರ ಬದಲಾಗಿ ಅಡುಗೆಯಲ್ಲಿ ಹುಳಿಯನ್ನು ತರಿಸೋಕೆ ಹುಣಸೆ ಹಣ್ಣನ್ನು ಬಳಕೆ ಮಾಡಲಾಗ್ತಿದೆ. ಇದರ ಜೊತೆಯಲ್ಲಿ ಮಾರುಕಟ್ಟೆಗೆ ಟೊಮ್ಯಾಟೋ ಪ್ಯೂರಿ ಲಗ್ಗೆ ಇಟ್ಟಿದ್ದು 200 ಗ್ರಾಂ ಪ್ಯೂರಿ ಕೇವಲ 30 ರೂಪಾಯಿಗೆ ಲಭ್ಯವಿದೆ.

ಟೊಮ್ಯಾಟೋ ಬೆಲೆ ಏರಿಕೆಯಾದ ಬಳಿಕ ಅಡುಗೆ ಮಾಡೋದು ಗೃಹಿಣಿಯರಿಗೆ ಕಷ್ಟವಾಗ್ತಿರೋದನ್ನು ಅರಿತ ಬೆಂಗಳೂರು ಮೂಲದ ಇಂಜಿನಿಯರ್​​ ಇಶಾನ್​ ಎಸ್​ ಎಂಬವರು ಹೋಂ ಡೆಲಿವರಿ ನೀಡುವ ಹಲವು ವೆಬ್​ಸೈಟ್​ಗಳಲ್ಲಿ ಟೊಮ್ಯಾಟೋ ಪ್ಯೂರಿಯನ್ನು ಖರೀದಿ ಮಾಡಿ ಬಳಕೆ ಮಾಡುತ್ತಿದ್ದಾರಂತೆ.

ಸದ್ಯ ಈರುಳ್ಳಿ ಹಾಗೂ ಶುಂಠಿಯ ಬೆಲೆ ಕೂಡ ಏರಿಕೆಯಾಗಿದೆ. ಆದರೆ ಟೊಮ್ಯಾಟೋ ಬೆಲೆ ಗಗನಕ್ಕೇರಿರೋದ್ರಿಂದ ಇದರ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ವಾಸ್ತುಶಿಲ್ಪಿ ಸುನೈನ್​ ಡಿ ತಮ್ಮ ಅಭಿಪ್ರಾಯ ತಿಳಿಸಿದ್ರು. ಅಲ್ಲದೇ ತರಕಾರಿ ಬೆಲೆ ಏರಿಕೆಯಿಂದಾಗಿ ಅನೇಕ ತರಕಾರಿ ವ್ಯಾಪಾರಿಗಳು ಅಂಗಡಿಗಳಲ್ಲಿ ತರಕಾರಿಗಳ ದಾಸ್ತಾನು ಇಡೋದನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ.

ಮತ್ತೊಂದು ಸುಲಭವಾದ ಸುವಾಸನೆಯ ಪರ್ಯಾಯವೆಂದರೆ ಆಮ್ಚುರ್ ಪುಡಿ ಅಥವಾ ನೆನೆಸಿದ ಹುಣಸೆಹಣ್ಣುಗಳನ್ನು ಬಳಸುವುದು. ಹೀಗಾಗಿ ಬಹುತೇಕ ಮಹಿಳೆಯರು ಹುಣಸೆ ಹಣ್ಣು ಹಾಗೂ ಆಮ್ಚುರ್​ ಪುಡಿಯತ್ತ ಮುಖ ಮಾಡ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read