BIG NEWS: ಕನ್ನಡ ನಾಡಿನ ಸಮಸ್ಯೆಗೆ ಸ್ಪಂದಿಸದ 28 ಸಂಸದರು ರಣಹೇಡಿಗಳು; ಕರವೇ ನಾರಾಯಣಗೌಡ ಆಕ್ರೋಶ

ಬೆಂಗಳೂರು: ರಾಜ್ಯದ 28 ಸಂಸದರು ರಣಹೇಡಿಗಳು, ಸ್ವಾಭಿಮಾನವಿಲ್ಲದವರು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷಟಿ.ಎ.ನಾರಾಯಾಗೌಡ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಸಂಸದರು ಕನ್ನಡ ನಾಡಿನ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ತೆಪ್ಪಗೆ ಕುಳಿತಿರುತ್ತಾರೆ. ಕೇವಲ ಅಧಿಕಾರದ ಲಾಲಸೆಯುಳ್ಳವರು ಎಂದು ಕಿಡಿಕಾರಿದ್ದಾರೆ. ಈ ವಿಚಾರವಾಗಿ ತಮಿಳುನಾಡಿನ ಸಂಸದರನ್ನು ಮೆಚ್ಚಬೇಕು. ತಮ್ಮ ನಾಡಿನ ನೆಲ, ಜಲದ ಸಮಸ್ಯೆ ಬಂದಾಗ ಅವರು ಅಧಿಕಾರವನ್ನು ಧಿಕ್ಕರಿಸಿ ಸ್ವಾಭಿಮಾನ ಮೆರೆಯುತ್ತಾರೆ ಎಂದು ಹೇಳಿದ್ದಾರೆ.

ಹಿಂದೆ ನಟ ಅಂಬರೀಶ್ ಕಾವೇರಿ ಜಲವಿವಾದ ಎದುರಾದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದರು. ಅವರಲ್ಲಿದ್ದ ಬದ್ಧತೆ ಈಗಿನ ಸಂಸದರಲ್ಲಿ ಯಾರಿಗೂ ಇಲ್ಲ. ದಿ.ಅನಂತಕುಮಾರ್ ಸಹ ಕಾವೇರಿ ಜಲ ವಿವಾದ ವೇಳೆ ರಾಜ್ಯ ಸರ್ಕಾರದ ಜೊತೆ ಮಾತನಾಡಿ, ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯುವುದಾಗಿ ಹೇಳುತ್ತಿದ್ದರು. ಆದರೆ ಈಗಿನ ಸಂಸದರು ಚಕಾರವೆತ್ತುತ್ತಿಲ್ಲ. ಕನಿಷ್ಠ ಪಕ್ಷ ರಾಜೀನಾಮೆ ಸಲ್ಲಿಸುವ ಬೆದರಿಕೆಯನ್ನಾದರೂ ಹಾಕಿದ್ರಾ? ಎಂದು ಪ್ರಶ್ನಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read