Good News: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ‘ಪಾರ್ಸೆಲ್’ ಬುಕಿಂಗ್

ಕರ್ನಾಟಕ ಪೋಸ್ಟಲ್ ಸರ್ಕಲ್, ಸೋಮವಾರದಂದು ನೂತನ ಸೇವೆಗೆ ಚಾಲನೆ ನೀಡಿದ್ದು, ಇದರಡಿ ಗ್ರಾಹಕರು ಅಂಚೆ ಕಚೇರಿಗೆ ತೆರಳದೆ ತಾವಿರುವ ಜಾಗದಲ್ಲೇ ಪಾರ್ಸೆಲ್ ಬುಕಿಂಗ್ ಮಾಡಬಹುದಾಗಿದೆ.

ಪ್ರಾಯೋಗಿಕವಾಗಿ ಬೆಂಗಳೂರಿನ ಅಬ್ಬಿಗೆರೆ ಹಾಗೂ ಪೀಣ್ಯದಲ್ಲಿ ಆರಂಭಿಸಿದ ಬಳಿಕ ಇದೀಗ ಈ ಸೇವೆಗೆ ಮಣಿಪಾಲ್ ಸೆಂಟರ್ ಬಳಿ ಚಾಲನೆ ನೀಡಲಾಗಿದೆ.

ಇದರನ್ವಯ ಅಂಚೆ ಇಲಾಖೆಗೆ ಸೇರಿದ ವಾಹನ ಮಧ್ಯಾಹ್ನ 2:30ಕ್ಕೆ ಮಣಿಪಾಲ್ ಸೆಂಟರ್ ಬಳಿ ತೆರಳಲಿದ್ದು, 3-30 ರ ವರೆಗೆ ಪಾರ್ಸಲ್ ಬುಕಿಂಗ್ ಗಳನ್ನು ಸ್ವೀಕರಿಸಲಿದೆ. ಬಳಿಕ ಇದನ್ನು ಸಂಬಂಧಪಟ್ಟ ಕೇಂದ್ರಗಳಿಗೆ ವಿಲೇವಾರಿ ಮಾಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಬಿಕಾಸೀಪುರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಮಹಾದೇವಪುರ ಇಂಡಸ್ಟ್ರಿಯಲ್ ಏರಿಯಾಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ದೊಡ್ಡ ಮಟ್ಟದ ಪಾರ್ಸೆಲ್ ಬುಕಿಂಗ್ ಇದ್ದ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ 9480809797 ಅಥವಾ bd.karbg@indiapost.gov.in ಇಮೇಲ್ ಸಂಪರ್ಕಿಸಬಹುದಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read