ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು 2025ನೇ ಸಾಲಿನ 2ನೇ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ kseab.karnataka.gov.in ಮತ್ತು karresults.nic.in ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಒಂದು ವೇಳೆ ವೆಬ್‌ಸೈಟ್‌ನಲ್ಲಿ ತೊಂದರೆ ಉಂಟಾದರೆ, ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ ಇತರ ವಿಧಾನಗಳ ಮೂಲಕವೂ ಫಲಿತಾಂಶವನ್ನು ತಿಳಿದುಕೊಳ್ಳಬಹುದು.
ಇದಲ್ಲದೆ, ಮಂಡಳಿಯು ಪಿಯುಸಿ 2 ಪರೀಕ್ಷೆ 2 ಮತ್ತು ಪರೀಕ್ಷೆ 3 ರ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಈ ಅವಕಾಶಗಳನ್ನು ಬಳಸಿಕೊಳ್ಳಬಹುದು. ಪಿಯುಸಿ 2 ಪರೀಕ್ಷೆ 2 ಏಪ್ರಿಲ್ 24 ರಿಂದ ಮೇ 8 ರವರೆಗೆ ನಡೆಯಲಿದ್ದು, ಪರೀಕ್ಷೆ 3 ಜೂನ್ 9 ರಿಂದ ಜೂನ್ 21 ರವರೆಗೆ ನಿಗದಿಯಾಗಿದೆ.
ಈ ಬಾರಿ ಶಿಕ್ಷಣ ಇಲಾಖೆಯು ಪೂರಕ ಪರೀಕ್ಷೆಯ ಬದಲು ಪರೀಕ್ಷೆ 1, 2 ಮತ್ತು 3 ಎಂಬ ಹೊಸ ಪದ್ಧತಿಯನ್ನು ಜಾರಿಗೆ ತಂದಿದೆ. ಮೊದಲ ಪರೀಕ್ಷೆ ಎಲ್ಲರಿಗೂ ಕಡ್ಡಾಯವಾಗಿದ್ದು, ನಂತರ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಎರಡು ಮತ್ತು ಮೂರನೇ ಪರೀಕ್ಷೆಗಳನ್ನು ಬರೆಯಬಹುದು. ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಅಂಕ ಸುಧಾರಿಸಿಕೊಳ್ಳಲು ಮರುಪರೀಕ್ಷೆಗೆ ಹಾಜರಾಗಬಹುದು ಮತ್ತು ಇದಕ್ಕೆ ಯಾವುದೇ ನಿರ್ಬಂಧವಿಲ್ಲ.
ದ್ವಿತೀಯ ಪಿ.ಯು.ಸಿ. ಫಲಿತಾಂಶವು ಇಂದು ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಜಾಲತಾಣ https://t.co/TIb2oPGfdp ನಲ್ಲಿ ಫಲಿತಾಂಶ ವೀಕ್ಷಿಸಬಹುದು.#PUC #Results pic.twitter.com/VoAtUg9gCU
— DIPR Karnataka (@KarnatakaVarthe) April 8, 2025