ಕರೀಷ್ಮಾ ಕಪೂರ್​ ಜೊತೆಯಲ್ಲಿ ಫೋಟೋಗೆ ನಿರಾಕರಿಸಿದ ಪುತ್ರ ಕಿಯಾನ್​ : ಗರಂ ಆದ ನೆಟ್ಟಿಗರು

ಬಾಲಿವುಡ್​ ನಟಿ ಕರೀಷ್ಮಾ ಕಪೂರ್​ ಶನಿವಾರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಕಿಯಾನ್​ ರಾಜ್​ ಕಪೂರ್​ ಜೊತೆಯಲ್ಲಿ ವೆಕೇಷನ್​ ಮೂಡ್​ನಲ್ಲಿದ್ದ ಕರೀಷ್ಮಾ ಮನೆಗೆ ಮರಳಿದ್ದಾರೆ. ಪಪ್ಪರಾಜಿಗಳು ಕರೀಷ್ಮಾರ ಫೋಟೋ ತೆಗೆಯಲು ಮುಂದಾಗುತ್ತಿದ್ದಂತೆಯೇ ನಾಚಿಕೆ ವ್ಯಕ್ತಪಡಿಸಿದ ಕಿಯಾನ್​ ತಾಯಿಯ ಜೊತೆ ಫೋಟೋಗೆ ಪೋಸ್​ ಕೊಡಲು ಒಪ್ಪದೇ ಅಂತರ ಕಾಯ್ದುಕೊಂಡಿದ್ದಾನೆ.

ಪಪ್ಪರಾಜೆಗಳು ತಾಯಿಯ ಜೊತೆ ಪೋಸ್​ ಕೊಡುವಂತೆ ಕಿಯಾನ್​ ಬಳಿ ಕೇಳಿದರೂ ಸಹ 13 ವರ್ಷದ ಕಿಯಾನ್​​ ಫೋಟೋಗೆ ಪೋಸ್​ ಕೊಡಲು ನಾಚಿಕೆ ಮಾಡಿದ್ದಾನೆ. ಮಗನಿಗೆ ಕ್ಯಾಮರಾ ಪೋಸ್​ ಕೊಡುವುದು ಕಷ್ಟವಾಗ್ತಿದೆ ಎಂಬುದನ್ನು ಅರಿತ ಕರೀಷ್ಮಾ ಪುತ್ರನನ್ನು ಅವನಷ್ಟಕ್ಕೆ ಇರಲು ಬಿಟ್ಟು ತಾವೊಬ್ಬರೇ ಕ್ಯಾಮರಾಗಳಿಗೆ ಪೋಸ್​ ಕೊಟ್ಟಿದ್ದಾರೆ.

ಕರೀಷ್ಮಾ ವೆಕೇಷನ್​ ಮುಗಿಸಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ವಿಡಿಯೋ ಇಂಟರ್ನೆಟ್​ನಲ್ಲಿ ವೈರಲ್​ ಆಗ್ತಿದೆ. ಅನೇಕರು ಇದು ಪುತ್ರ ತಾಯಿಗೆ ಮಾಡಿದ ಅವಮಾನ ಎಂದು ಜರಿದಿದ್ದಾರೆ. ಇನ್ನೂ ಕೆಲವರು ಕರೀಷ್ಮಾ ಮಗನಿಗೆ ಫೋಟೋಗೆ ಪೋಸ್​ ಕೊಡಲು ಒತ್ತಾಯಿಸದೇ ಆತನನ್ನು ಅವನಿಷ್ಟಕ್ಕೆ ಇರಲು ಬಿಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಆದರೂ ಕೆಲವರು ನಮ್ಮ ಕಾಲದಲ್ಲಿ ನಾವು ಪೋಷಕರೊಂದಿಗೆ ಈ ರೀತಿ ವರ್ತಿಸುತ್ತಿರಲಿಲ್ಲ. ಈಗಿನ ಮಕ್ಕಳಿಗೆ ಪೋಷಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read