‘ಸುರರು -ಅಸುರರು ಕಾದಾಡಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್’: ಮೈಲಾರಲಿಂಗೇಶ್ವರ ಕಾರಣಿಕ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಪಟ್ಟಣದ ಮೈಲಾರಲಿಂಗೇಶ್ವರ ಕಾರಣಿಕವನ್ನು ಗೊರವಯ್ಯ ದಶರಥ ಪೂಜಾರ್ ನುಡಿದಿದ್ದಾರೆ.

ವಿಜಯದಶಮಿ ಹಬ್ಬದ ಹಿನ್ನಲೆಯಲ್ಲಿ ಬೀರೂರಿನ ಸರಸ್ವತಿಪುರದ ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಮೆರವಣಿಗೆ ಬೆಳಗಿನ ಜಾವ 4 ಗಂಟೆವರೆಗೆ ನಡೆದಿದೆ. 4.45ಕ್ಕೆ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ್ದ ಬಿಲ್ಲನ್ನೇರಿದ ಗೊರವಯ್ಯ ದಶರಥ ಪೂಜಾರ್ ಕಾರಣಿಕ ನುಡಿಗಳನ್ನಾಡಿದ್ದಾರೆ.

‘ಇಟ್ಟ ರಾಮನ ಬಾಣ ಹುಸಿಯಿಲ್ಲ, ಸುರರು ಅಸುರರು ಕಾದಾಡಿದರು. ಭಕ್ತ ಕೋಟಿಗೆ ಮಂಗಳವಾಯಿತು. ಸರ್ವರೂ ಎಚ್ಚರದಿಂದ ಇರಬೇಕು’ ಎಂದು ಗೊರವಯ್ಯ ದಶರಥ ಪೂಜಾರ್ ಕಾರಣಿಕ ನುಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read