‘ಕಾಂತಾರ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

Kantara Actors, Cast & Crew » StarsUnfolded

ಕಳೆದ ವರ್ಷ ಸೆಪ್ಟಂಬರ್ 30ರಂದು ಬಿಡುಗಡೆಯಾಗಿದ್ದ ‘ಕಾಂತರಾ’ ಸಿನಿಮಾ ದೇಶದಲ್ಲೆಡೆ ಅಬ್ಬರಿಸಿ ದಾಖಲೆ ಬರೆದಿತ್ತು ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಈ ಚಿತ್ರ ಇಂದಿಗೆ ಒಂದು ವರ್ಷ ಪೂರೈಸಿದೆ, ಈ ಸಂತಸವನ್ನು ಚಿತ್ರತಂಡ ತನ್ನ ಅಧಿಕೃತ instagram ನಲ್ಲಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದೆ.

ಸ್ಯಾಂಡಲ್ವುಡ್ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂ ಬ್ಯಾನರ್ ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಮುಖ್ಯ ಭೂಮಿಯಲ್ಲಿದ್ದು, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಪ್ರದೀಪ್ ಶೆಟ್ಟಿ, ಚಂದ್ರಕಲಾ ರಾವ್, ನವೀನ್, ಸ್ವರಾಜ್ ಶೆಟ್ಟಿ, ಸತೀಶ್ ಆಚಾರ್ಯ, ರಕ್ಷಿತ್ ರಾಮಚಂದ್ರ ಶೆಟ್ಟಿ, ದೀಪಕ್ ರಾಯ್ ಸೇರಿದಂತೆ ಹಲವರ ತಾರಾ ಬಳಗವಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನವಿದೆ. ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಕರಾವಳಿ ಕರ್ನಾಟಕ ಭಾಗದ ಕೆರಾಡಿಯಲ್ಲಿ ನಡೆದಿದೆ,

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read