ಶಿವಮೊಗ್ಗ: ಕಾಂತಾರ ಚಾಪ್ಟರ್-1ರ ಚಿತ್ರೀಕರಣದ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ಸಿನಿಮಾ ಶೂಟಿಂಗ್ ಮಾಡುತ್ತಿದ್ದ ವೇಳೆ ದೋಣಿಯೊಂದು ಜಲಾಶಯದ ನೀರಿನಲ್ಲಿ ಮಗುಚಿದೆ.
ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ಕ್ಯಾಮರಾಮೆನ್, ನಟ ರಿಷಬ್ ಶೆಟ್ತಿ ಸೇರಿದಂತೆ 30 ಜನರು ಅಪಾಯದಿಂದ ಪಾರಾಗಿದ್ದಾರೆ.
ಡ್ಯಾಂ ನೀರಿನಲ್ಲಿ ದೋಣಿ ಮಗುಚುತ್ತಿದ್ದಂತೆ ಕಲಾವಿದರು, ತಂತ್ರಜ್ಞರು ನೀರಿನಲ್ಲಿ ಈಜಿಕೊಂಡು ದಡ ಸೇರಿ ಬಚಾವ್ ಆಗಿದ್ದಾರೆ. ಕಾಂತಾರ ಚಾಪ್ಟರ್ 1ರ ಕೊನೇ ಹಂತದ ಶೂಟಿಂಗ್ ಮಾಸ್ತಿಕಟ್ಟೆ ಭಾಗದಲ್ಲಿ ನಡೆಯುತ್ತಿದೆ. 15 ದಿನಗಳ ಕಾಲ ಈ ಭಾಗದಲ್ಲಿ ಚಿತ್ರೀಕರಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಈಗ ದೋಣಿ ಮಗುಚಿ ಕ್ಯಾಮರಾ ಸೇರಿದಂತೆ ಎಲ್ಲಾ ಉಪಕರಣಗಳು ನೀರು ಪಾಲಾಗಿವೆ.

 
			 
		 
		 
		 
		 Loading ...
 Loading ... 
		 
		 
		