‘ಕಾಂತಾರ: ಅಧ್ಯಾಯ 1’ ರ ಕುರಿತು ಬಿಗ್‌ ಅಪ್ಡೇಟ್; 60 ದಿನಗಳ ಮ್ಯಾರಥಾನ್‌ ಶೂಟಿಂಗ್‌ ಆರಂಭಿಸಿದ ರಿಷಬ್

ʼಕಾಂತಾರ’ ದ ಭರ್ಜರಿ ಯಶಸ್ಸಿನ ನಂತರ, ಹೊಂಬಾಳೆ ಫಿಲಂಸ್‌ ನ ಬಹು ನಿರೀಕ್ಷಿತ ಪ್ರೀಕ್ವೆಲ್, ‘ಕಾಂತಾರ: ಅಧ್ಯಾಯ 1’, ನ್ನು ಅದ್ದೂರಿಯಾಗಿ ನಿರ್ಮಿಸಲು ಎಲ್ಲ ಸಿದ್ದತೆಗಳು ನಡೆದಿವೆ. ನಾಯಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಈ ಕಥೆಗೆ ಜೀವ ತುಂಬಲು 60 ದಿನಗಳ ಮ್ಯಾರಥಾನ್ ಶೂಟಿಂಗ್ ಪ್ರಾರಂಭಿಸಿದ್ದಾರೆ.

ಪ್ರಸ್ತುತ ನಿರ್ಮಾಣದ ಮಾಹಿತಿಯಂತೆ, ‘ಕಾಂತಾರ: ಅಧ್ಯಾಯ 1’ ತನ್ನ ಮೂರನೇ ಶೂಟಿಂಗ್ ವೇಳಾಪಟ್ಟಿಯನ್ನು ಪ್ರವೇಶಿಸಿದೆ. ವಿಸ್ತೃತ 60 ದಿನಗಳ ಚಿತ್ರೀಕರಣದಲ್ಲಿ ರಿಷಬ್ ಮತ್ತವರ ತಂಡ ದಣಿವರಿವೆಯಿಲ್ಲದಂತೆ ಕೆಲಸ ಮಾಡುತ್ತಿದೆ.

ತಮ್ಮ ಪಾತ್ರದ ತಯಾರಿಗಾಗಿ, ರಿಷಬ್ ಶೆಟ್ಟಿ ಕುದುರೆ ಸವಾರಿ ಮತ್ತು ಪ್ರಾಚೀನ ಭಾರತೀಯ ಸಮರ ಕಲೆಯಾದ ಕಳರಿಪಯಟ್ಟುಗಳಲ್ಲಿ ಕಠಿಣ ತರಬೇತಿಯನ್ನು ಪಡೆದಿದ್ದಾರೆ, ಇದು ಚಿತ್ರದ ಸಾಹಸ ದೃಶ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ಕೌಶಲ್ಯಗಳನ್ನು ಪರಿಪೂರ್ಣಗೊಳಿಸಲು ಒಂದು ವರ್ಷವನ್ನು ಕಳೆದ ನಂತರ, ಅವರು ಇದೀಗ ಶೂಟಿಂಗ್‌ ನತ್ತ ತಮ್ಮ ಗಮನವನ್ನು ಹರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read