ಬೆಂಗಳೂರು : ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರ ಧೂಳೆಬ್ಬಿಸಿದೆ.
ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದ ಕಾಂತಾರ-1 ಅಬ್ಬರದ ಗಳಿಕೆ ಮಾಡಿದ್ದು, 1 ವಾರಕ್ಕೆ ಬರೋಬ್ಬರಿ 509 ಕೋಟಿ ಕಲೆಕ್ಷನ್ ಮಾಡಿದೆ.
ರಿಲೀಸ್ ಆದ 2 ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿದ ಚಿತ್ರ 1 ವಾರಕ್ಕೆ 509.25 ಕೋಟಿ ಗಳಿಸಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.ದೇಶಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ, ದೇಶಾದ್ಯಂತ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಕಾಂತಾರ-1 ಪೌರಾಣಿಕ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಪಾತ್ರವರ್ಗ
* ರಿಷಬ್ ಶೆಟ್ಟಿ – ಬೆರ್ಮೆ (ಕಥಾನಾಯಕ), ನಾಗ ಸಾಧು ಮತ್ತು ಯೋಧ
• ರುಕ್ಮಿಣಿ ವಸಂತ್ – ಕನಕವತಿ ರಾಜಕುಮಾರಿ
• ಗುಲ್ಶನ್ ದೇವಯ್ಯ – ಕುಲಶೇಖರ, ರಾಜವಂಶದ ಶಕ್ತಿಶಾಲಿ ನಾಯಕ
• ಜಯರಾಮ್ – ವಿಜಯೇಂದ್ರ ಮಹಾರಾಜ, ಕದಂಬ ವಂಶದ ರಾಜ
• ಅಚ್ಯುತ್ ಕುಮಾರ್ – ದೇವಾಲಯದ ಅರ್ಚಕ
• ಮಾನಸಿ ಸುಧೀರ್ – ಬೆರ್ಮೆನ ತಾಯಿ
• ಶೈನ್ ಶೆಟ್ಟಿ – ಬೆರ್ಮೆನ ಸಹೋದರ
The divine cinematic storm continues to soar higher at the box office 🔥💥#KantaraChapter1 crosses 509.25 CRORES+ GBOC worldwide in the 1st week! #BlockbusterKantara running successfully in cinemas near you. ❤️🔥#KantaraInCinemasNow #DivineBlockbusterKantara… pic.twitter.com/jxYuPN47jL
— Hombale Films (@hombalefilms) October 10, 2025