ʼವಿಶ್ವಕಪ್‌ʼ ನಲ್ಲಿ ತನ್ನ ಮೊದಲ ಶತಕ ಪೂರೈಸಿದ ಕನ್ನಡಿಗ ರಚಿನ್ ರವೀಂದ್ರ

youngest-world-cup-debutant-centurion

ನಿನ್ನೆ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ನಡುವಣ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 9 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಕಳೆದ ವಿಶ್ವಕಪ್ ನ ಸೇಡನ್ನು ತೀರಿಸಿಕೊಂಡಿದೆ.

ಈ ಪಂದ್ಯದಲ್ಲಿ ಡೆವೊನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ, ಡೆವೊನ್ ಕಾನ್ವೇ 121 ಎಸೆತಗಳಲ್ಲಿ 152 ರನ್ ಬಾರಿಸಿದರೆ ರಚಿನ್ ರವೀಂದ್ರ 123 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಕೆನ್ ವಿಲಿಯಂಸನ್ ಜಾಗದಲ್ಲಿ ಬಂದು ಬ್ಯಾಟಿಂಗ್ ಮಾಡಿದ ರಚಿನ್ ರವೀಂದ್ರ ಒಂದೇ ದಿನದಲ್ಲಿ ಸ್ಟಾರ್ ಆಗಿದ್ದಾರೆ. ಅವರ ತಂದೆ – ತಾಯಿ ಕರ್ನಾಟಕದವರೇ ಆಗಿದ್ದು, ಇವರ ಈ ಬ್ಯಾಟಿಂಗ್ ವೈಖರಿ ನೋಡಿದ ಹಲವಾರು ಕನ್ನಡಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗುವಿರಾ ಎಂದು ಕೋರಿಕೊಂಡಿದ್ದಾರೆ.

ರಚಿನ್ ರವೀಂದ್ರ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಕೂಡ ಈಗಾಗಲೇ ವೈರಲ್ ಆಗಿದೆ. ನ್ಯೂಜಿಲೆಂಡ್ ತಂಡಕ್ಕೆ ಬಲಿಷ್ಟ ಆಲ್ ರೌಂಡರ್ ಸಿಕ್ಕಾಗಿದೆ.  ಏಕದಿನ ಕ್ರಿಕೆಟ್ ನಲ್ಲಿ ಇದು ಅವರ ಮೊದಲನೇ ಶತಕವಾಗಿದ್ದು, ತಮ್ಮ ಮೊದಲ  ವಿಶ್ವಕಪ್ನಲ್ಲೇ ನೆರವೇರಿದೆ.

Who is Rachin Ravindra? - Everything You Need to Know about New Zealand's young batting sensation

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read