BIG NEWS : ಕೇಂದ್ರ ಸರ್ಕಾರದ ‘ಬಿಲಿಯನೇರ್ ರೈತ’ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗ

ಇತ್ತೀಚಿನ ದಿನಗಳಲ್ಲಿ ಯುವಜನತೆ ಕೃಷಿ ಕೆಲಸಬಿಟ್ಟು ನಗರದತ್ತ ವಲಸೆ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಹೆಚ್ಚು ಸಂಬಳ ನೀಡುವ ಕಂಪನಿಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಆದರೆ ರೈತರೊಬ್ಬರು ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬಿಲಿಯನೇರ್ ರೈತ ಪ್ರಶಸ್ತಿʼಗೆ ಆಯ್ಕೆಯಾಗಿದ್ದಾರೆ. ಕೃಷಿಯಿಂದಲೇ ವಾರ್ಷಿಕ 1 ಕೋಟಿ ರೂಪಾಯಿಗಳಿಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಕುಂದಾಪುರದ ತೆಕ್ಕೆಟೆ ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರ ನೀಡುವ ʼಬಿಲಿಯನೇರ್ ರೈತ ಪ್ರಶಸ್ತಿʼಗೆ ಆಯ್ಕೆಯಾಗಿದ್ದಾರೆ. ನೈಸರ್ಗಿಕ ಕೃಷಿ ಮೂಲಕ ಕೃಷಿಯಲ್ಲಿ ಅಪಾರ ಸಾಧನೆ ಮಾಡಿ ಇತರ ರೈತರಿಗೂ ಮಾದರಿ ಆಗಿರುವ ಇವರಿಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 7 ರಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವೈವಿಧ್ಯಮಯ ಕೃಷಿ ಪದ್ದತಿ ಅಳವಡಿಸಿ 1634 ತಳಿಯ ಹಣ್ಣಿನ ಗಿಡ ಬೆಳೆದಿದ್ದಾರೆ. ಸಾವಯವ ಕೃಷಿ ಪದ್ದತಿ ಬಳಕೆ, ಇಂಗು ಗುಂಡಿ ನಿರ್ಮಾಣ, ಜೊತೆಗೆ ಹೈನುಗಾರಿಕೆಯ್ಲೂ ತೊಡಗಿಕೊಂಡಿದ್ದಾರೆ.

https://twitter.com/BJP4Karnataka/status/1731931303988347090

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read