Delhi Horror: ಮೃತ ಯುವತಿ ಸ್ನೇಹಿತೆ ಕುರಿತು ಸ್ಪೋಟಕ ಮಾಹಿತಿ ಬಹಿರಂಗ

Kanjhawala Death Case: Prime Accused Nidhi Earlier Arrested In Drug Smuggling Case In Agra

ಹೊಸ ವರ್ಷಾಚರಣೆಯಂದು ದೆಹಲಿಯಲ್ಲಿ ನಡೆದ 20 ವರ್ಷದ ಯುವತಿ ಅಂಜಲಿ ಅಪಘಾತದ ಪ್ರಕರಣದಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳು ಹೊರಬರ್ತಿವೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಯುವತಿ ನಿಧಿ, ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಈ ಹಿಂದೆ ಬಂಧಿತಳಾಗಿದ್ದಳು ಎಂಬುದು ಬಯಲಾಗಿದೆ.

ತೆಲಂಗಾಣದಿಂದ ಡ್ರಗ್ಸ್ ತಂದಿದ್ದಕ್ಕಾಗಿ ಆಗ್ರಾ ರೈಲು ನಿಲ್ದಾಣದಲ್ಲಿ ಆಕೆಯನ್ನು ತಡೆಹಿಡಿದು ನಂತರ ಆಕೆಯನ್ನ ಬಂಧಿಸಲಾಗಿತ್ತು. ಆದರೆ ಈ ಹಿಂದೆ ಆಕೆಯ ಮೇಲೆ ಯಾವುದೇ ಪೊಲೀಸ್ ಪ್ರಕರಣಗಳಿರಲಿಲ್ಲ ಎಂದು ಹೇಳಲಾಗಿತ್ತು.

ಅಪಘಾತ ಪ್ರಕರಣದಲ್ಲಿ ನಿಧಿಯ ಹೇಳಿಕೆಗಳು ಭಾರೀ ವಿರೋಧಾಭಾಸಗಳಿಂದ ಕೂಡಿದ್ದರಿಂದ ತನಿಖೆಯ ವಿಚಾರಣೆಗೆ ಶುಕ್ರವಾರ ಆಕೆಯನ್ನು ಮತ್ತೆ ಕರೆದಿದ್ದರು. ಈ ವೇಳೆ ಪೊಲೀಸರು ಇನ್ನೂ ಕೆಲವು ಐಪಿಸಿ ಸೆಕ್ಷನ್‌ಗಳನ್ನು ಸೇರಿಸಿ ಪ್ರಕರಣವನ್ನು ಬಲಿಷ್ಠಗೊಳಿಸಿದ್ದಾರೆ.

ಜನವರಿ 1 ರಂದು ಅಂಜಲಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಬಲೆನೊ ಕಾರಿಗೆ ಸಿಕ್ಕಿಹಾಕಿಕೊಂಡು 12 ಕಿ.ಮೀ. ವರೆಗೆ ಎಳೆದೊಯ್ದಿದ್ದು ಸಾವಿಗೆ ಕಾರಣವಾಯಿತು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read