ನಾನೆಂಥ ಹುಚ್ಚಿ ಅಂತ ನಿಮಗೆ ಗೊತ್ತಿಲ್ಲ….! ಬಾಲಿವುಡ್ ದಂಪತಿಗೆ ನಟಿ ಕಂಗನಾ ಧಮ್ಕಿ

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿವಾದಾತ್ಮಕ ಹೇಳಿಕೆಗಳ ಕಾರಣಕ್ಕೆ ಸಕ್ಕತ್ ಫೇಮಸ್. ಚಿತ್ರರಂಗದಲ್ಲಿನ ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಕಂಗನಾ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ರಾಜಕೀಯಕ್ಕೂ ಬರಲು ಆಸಕ್ತಿ ಹೊಂದಿರುವ ಕಂಗನಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಇದೀಗ ಕಂಗನಾ ಮತ್ತೊಂದು ಸ್ಪೋಟಕ ಸಂಗತಿ ಹೇಳಿದ್ದು, ಬಾಲಿವುಡ್ ದಂಪತಿ ತನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅವರು ಇದನ್ನು ಬರೆದುಕೊಂಡಿದ್ದು, ದಂಪತಿಯ ಹೆಸರನ್ನು ಅವರು ಉಲ್ಲೇಖಿಸಿಲ್ಲವಾದರೂ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಇರಬಹುದೆಂದು ಊಹಿಸಲಾಗುತ್ತಿದೆ.

ಇದರ ಮಧ್ಯೆ ಸೋಮವಾರದಂದು ಮತ್ತೊಂದು ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದು, ನಿನ್ನೆ ರಾತ್ರಿಯಿಂದ ನನ್ನನ್ನು ಯಾರೂ ಫಾಲೋ ಮಾಡುತ್ತಿಲ್ಲ. ಚಂಗು – ಮಂಗು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನನ್ನ ಜೊತೆ ಆಟವಾಡಲು ನಾನು ಹಳ್ಳಿಯ ಮುಗ್ದೆಯಲ್ಲ. ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇನೆ. ನಾನು ಎಷ್ಟು ದೊಡ್ಡ ಹುಚ್ಚಿ ಅಂತ ನಿಮಗಿನ್ನು ಗೊತ್ತಿಲ್ಲ ಎಂದು ಧಮ್ಕಿ ಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read