ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ‘ಕಂಗನಾ ರನೌತ್’ : ‘Emergency’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಇಂದಿರಾ ಗಾಂಧಿ ಪಾತ್ರದಲ್ಲಿ ಸಂಸದೆ ಕಂಗನಾ ರನೌತ್ ಕಾಣಿಸಿಕೊಂಡಿರುವ ‘Emergency’ ಚಿತ್ರದ ಟ್ರೇಲರ್ ರಿಲೀಸ್  ಆಗಿದೆ.

ಈ ಚಿತ್ರವು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಚರಿತ್ರೆಯನ್ನು ಆಧರಿಸಿದ ಸಿನಿಮವಾಗಿದೆ. ತಮ್ಮ ಈ ಚಿತ್ರದ ಮೂಲಕ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ ಎಂದು ಕಂಗನಾ ಹೇಳಿದ್ದಾರೆ.ಈ ಚಿತ್ರದಲ್ಲಿ ಅವರು ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ದಿವಂಗತ ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಢಾಕಾಡ್ ಖ್ಯಾತಿಯ ರಿತೇಶ್ ಶಾ ಬರೆದಿರುವ ಈ ಚಿತ್ರವನ್ನು 2021 ರಲ್ಲಿ ಘೋಷಿಸಲಾಯಿತು. ಈ ಹಿಂದೆ, ಟೀಸರ್ ಬಿಡುಗಡೆಯಾಗಿದ್ದು, ಕಂಗನಾ ಪ್ರಧಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರವು ನವೆಂಬರ್ 24, 2023 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read