ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮತ್ತೊಂದೆಡೆ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ನಿರಂತರವಾಗಿ ಸುರುಯುತ್ತಿರುವ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿ ಭೂಮಿ, ರಸ್ತೆಗಳು ಸಂಪೂರ್ಣ ನಡಿಯಂತಾಗಿವೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಕಲಬುರಗಿ ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಇಂದು ಹಾಗೂ ನಾಳೆ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಡಿಡಿಪಿಐ ಸುತ್ತೋಲೆ ಕೂಡ ಪ್ರಕಟಿಸಿದ್ದಾರೆ.
ಶಾಲೆಗಳಿಗೆ ಈಗಾಗಲೇ ದಸರಾ ರಜೆ ಇರುವುದರಿಂದ ಹಲವು ಶಾಲೆಗಳಿಗೆ ರಜೆ ಇದೆ. ಆದರೆ ಜಿಲ್ಲೆಯ ಅನೇಕ ಶಾಲೆಗಳು ದಸರಾ ರಜೆಯಿಂದ ವಿನಾಯಿತಿ ಪಡೆದು ಶಾಲೆಗಳನ್ನು, ತರಗತಿಗಳನ್ನು ನಡೆಸುತ್ತಿವೆ. ಅಂತಹ ಶಾಲಾ-ಕಾಲೇಜುಗಳಿಗೆ ಎರಡು ಡಿನಗಳ ಕಾಲ ಇಂದು ಹಾಗೂ ನಾಳೆ ಸೆ.28ರಂದು ರಜೆ ಘೋಷಿಸಲಾಗಿದೆ.