ಕಲಬುರಗಿ: ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ರಾಮಮಂದಿರ ಸರ್ಕಲ್ ಬಳಿ ನಡೆದಿದೆ.
ಮೊದಲು ಎಲೆಕ್ಟ್ರಿಕ್ ಶಾಪ್ ನಲ್ಲಿ ಇಂದು ಬೆಳಗಿನ ಜಾವ ಕಾಣಿಸಿಕೊಂಡ ಬೆಂಕಿ ಬಳಿಕ ಇಡೀ ಅಂಗಡಿಯನ್ನು ವ್ಯಾಪಿಸಿದೆ. ಬಳಿಕ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಗಾಣದ ಎಣ್ಣೆ ತಯಾರಿಕಾ ಘಟಕ, ಹಾರ್ಡ್ ವೇರ್ ಶಾಪ್ ಹಾಗೂ ಟೀ ಅಂಗಡಿಗೂ ವ್ಯಾಪಿಸಿದೆ. ಒಟ್ಟು ನಾಲ್ಕು ಅಂಗಡಿಗಳು ಬೆಂಕಿಯಲ್ಲಿ ಹೊತ್ತಿ ಉರಿದಿವೆ.
ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಭಾರಿ ನಷ್ಟವುಂಟಾಗಿದೆ. ಘಟನಾಅ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಿಯಂತ್ರಿಸಿದ್ದಾರೆ.