ತನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ಹರ್ಷನ್ ಅಭಿನಯದ ‘ಕಾಡುಮಳೆ’ ಚಿತ್ರ ಇದೇ ಜನವರಿ 31ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಟೀಸರ್ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಈ ಚಿತ್ರವನ್ನು ಸಮರ್ಥ ನಿರ್ದೇಶಿಸಿದ್ದು, ಹರ್ಶನ್ ಸೇರಿದಂತೆ ಸಂಗೀತ, ವಿಜಯಲಕ್ಷ್ಮಿ, ಗೌತಮ್, ಗಿಲ್ಲಿ ಮಂಜು ತೆರೆ ಹಂಚಿಕೊಂಡಿದ್ದಾರೆ. ಕಾಸ್ಮೊಸ್ ಮೂವೀಸ್ ಬ್ಯಾನರ್ ನಲ್ಲಿ ಮಂಜುನಾಥ್ ಟಿ.ಎಸ್ ನಿರ್ಮಾಣ ಮಾಡಿದ್ದು, ಜೈಜು ಪೋಪಾಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಕಾರ್ತಿಕ್ ಭಟ್ ಸಂಭಾಷಣೆ, ದೀಪೇಶ್ ಎನ್ ಆಚಾರ್ಯ ಸಂಕಲನ, ರಾಜು ಎನ್ಎಂ ಛಾಯಾಗ್ರಹಣವಿದೆ.