ಮಂಗಳೂರು: ಕದ್ರಿ ಪೊಲೀಸ್ ಠಾಣೆಯ ಎ ಎಸ್ ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡ್ರೊ ಪೊಲೀಸ್ ಠಾಣೆಯ ಎ ಎಸ್ ಐ ತಸ್ಲಿಂ, ಸಿಬ್ಬಂದಿಗಳಾದ ರವಿ, ದೀಪಕ್, ಮಹಾಂತೇಶ್ ಹಾಗೂ ಎ ಎಸ್ ಐ ತಸ್ಲೀಂಗೆ ಸಹಕರಿಸಿದ್ದ ಮತ್ತೋರ್ವ ಸಿಬ್ಬಂದಿ ವಿನೋದ್ ಸಸ್ಪೆಂಡ್ ಆದವರು.
ಕದ್ರಿ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ವೇಳೆ ಐವರು ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಐವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
You Might Also Like
TAGGED:ಕದ್ರಿ ಪೊಲೀಸ್ ಠಾಣೆ