ಶಿವಮೊಗ್ಗ : ಶಿವಮೊಗ್ಗದಲ್ಲಿ ಐಎಸ್ ಐಎಸ್ ನಿಂದ ಟ್ರಯಲ್ ಬ್ಲಾಸ್ಟ್ ಪ್ರಕರಣ, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದ ಕಿಂಗ್ ಪಿನ್ ಅರಾಫತ್ ಅಲಿಯನ್ನು ಗುರುವಾರ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ ಐಎ ಪೊಲೀಸರು ಬಂಧಿಸಿದ್ದಾರೆ.
ಅರಾಫತ್ ಅಲಿಯನ್ನು ತನಿಖೆಗೊಳಪಡಿಸುವ ವೇಳೆ ಸ್ಪೋಟಕ ಮಾಹಿತಿಯೊಂದು ಬಯಲಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಕದ್ರಿ ಮಂಜುನಾಥನ ದೇವಾಲಯವೇ ಉಗ್ರ ಅರಾಫತ್ ಅಲಿಯ ಟಾರ್ಗೆಟ್ ಆಗಿತ್ತು ಎಂಬ ಸ್ಪೋಟಕ ಸತ್ಯ ಬಯಲಾಗಿದೆ. ಆರೋಪಿಗಳು ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥನ ದೇವಾಲಯವನ್ನು ಸ್ಪೋಟಿಸುವ ಗುರಿ ಹೊಂದಿದ್ದರು ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.
ಶಿವಮೊಗ್ಗದಲ್ಲಿ ಐಎಸ್ ಐಎಸ್ ನಿಂದ ಟ್ರಯಲ್ ಬ್ಲಾಸ್ಟ್ ಪ್ರಕರಣ, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದ ಕಿಂಗ್ ಪಿನ್ ಅರಾಫತ್ ಅಲಿಯನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ ಐಎ ಪೊಲೀಸರು ಬಂಧಿಸಿದ್ದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾಗಿದ್ದ ಆರೋಪಿ ಅರಾಫತ್ ಅಲಿ, ನೇರವಾಗಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದೇ ವಿದೇಶಗಳಲ್ಲಿ ಕುಳಿತು ಹಣದ ವ್ಯವಸ್ಥೆ ಮಾಡುತ್ತಿದ್ದನು. 2020ರಿಂದ ಈತ ತಲೆಮರೆಸಿಕೊಂಡಿದ್ದನು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದನು.
SHIVAMOGGA ISIS TERROR ACCUSED ARAFATH ALI NABBED BY NIA AT DELHI AIRPORT, TAKEN INTO CUSTODY ON ARRIVAL FROM NAIROBI, WAS ABSCONDING SINCE 2020 pic.twitter.com/eQxSuISi12
— NIA India (@NIA_India) September 14, 2023