ಒಂದೇ ಓವರ್ ನಲ್ಲಿ 7 ಸಿಕ್ಸರ್ ಅಂದ್ರೆ ನೀವು ನಂಬಲೇಬೇಕು…..!

ಒಂದು ಓವರ್ ಅಂದ್ರೆ ಆರು ಬಾಲ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲದೆ ಈಗಾಗಲೇ ಹಲವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಹ ಬಾರಿಸಿದ್ದಾರೆ. ಆದರೆ ಒಂದು ಓವರ್ನಲ್ಲಿ ಏಳು ಸಿಕ್ಸರ್ ಯಾರಾದರೂ ಹೊಡೆದಿದ್ದಾರೆ ಎಂದರೆ ನಿಜಕ್ಕೂ ಅದು ಅಚ್ಚರಿಯ ಸಂಗತಿ. ಅಂತಹದೊಂದು ಘಟನೆ ಈಗ ನಡೆದಿದೆ.

ಹೌದು, ಶನಿವಾರದಂದು ನಡೆದ ಕಾಬುಲ್ ಪ್ರೀಮಿಯರ್ ಲೀಗ್ ನಲ್ಲಿ ಶಹೀನ್ ಹಂಟರ್ಸ್ ತಂಡದ ನಾಯಕ ಆಫ್ಘಾನಿಸ್ತಾನದ ಎಡಗೈ ಆಟಗಾರ ಸೆದಿಖುಲ್ಲಾ ಅಟಲ್ ಇಂತಹದೊಂದು ಅಪೂರ್ವ ಸಾಧನೆ ಮಾಡಿದ್ದಾರೆ.

ಅಷ್ಟಕ್ಕೂ ಇವರು ಈ ಸಾಧನೆ ಮಾಡಲು ಕಾರಣವಾಗಿದ್ದು ಈ ಓವರ್ ನಲ್ಲಿ ಎಸೆದ ನೋ ಬಾಲ್. ಅಮೀರ್ ಅವರ ಬೌಲಿಂಗ್‍ನ ಮೊದಲ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸಿದ್ದು, ಆದರೆ ಅದು ನೋ ಬಾಲ್ ಆಗಿತ್ತು. ನಂತರ ಸತತ ನಾಲ್ಕು ಬಾಲ್ ವೈಡ್ ಆಗಿದ್ದು, ಬಳಿಕದ ಫ್ರೀ ಹಿಟ್ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದ್ದರು. ನಂತರದ ಐದೂ ಎಸೆತಗಳಲ್ಲಿ ಅವರು ಸಿಕ್ಸರ್ ಹೊಡೆದಿದ್ದು ಹೀಗಾಗಿ ಒಂದೇ ಓವರ್ ನಲ್ಲಿ ಏಳು ಸಿಕ್ಸರ್ ಹೊಡೆದ ದಾಖಲೆಗೆ ಪಾತ್ರರಾದರು.

https://youtu.be/6w07slzvwkM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read