ಜನವರಿ 13 ರಂದು ಕೆ-ಸೆಟ್ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು :  ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಸೆಟ್ ಪರೀಕ್ಷೆ ನಡೆಯುತ್ತಿದ್ದು ದಾವಣಗೆರೆ ನಗರದ 25 ಕೇಂದ್ರಗಳಲ್ಲಿ ಜನವರಿ 13 ರಂದು ಪರೀಕ್ಷೆ ನಡೆಯಲಿದ್ದು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದೆ ಶಿಸ್ತುಬದ್ದವಾಗಿ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

ಕೆಸೆಟ್ ಪರೀಕ್ಷೆಯು ಜ.13 ರಂದು ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಮೊದಲ ಪತ್ರಿಕೆ ಮತ್ತು ಮ.12 ರಿಂದ 2 ಗಂಟೆಯವರೆಗೆ ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯನ್ನು ಶಿಸ್ತುಬದ್ದವಾಗಿ ನಡೆಸಬೇಕು, ಅಭ್ಯರ್ಥಿಗಳು ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳು, ಕ್ಯಾಲ್ಕುಲೇಟರ್ಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಬರುವಂತಿಲ್ಲ. ಸುಗಮ ಮತ್ತು ಶಾಂತಯುತ ಪರೀಕ್ಷೆ ಮತ್ತು ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟಲು ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ  ಜಾರಿಗೊಳಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read