ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಹಲವು ಮಠಾಧೀಶರು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಮಠಾಧೀಶರ ಭೇಟಿ ಬಳಿಕ ಮಾತನಾಡಿದ ಕೆ.ಎನ್.ರಾಜಣ್ಣ, ಹಲವು ಚಾರಗಳನ್ನು ಸ್ಪಷ್ಟ ಪಡಿಸಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಕೆ.ಎನ್.ರಾಜಣ್ಣ, ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲು ಹಲವಾರು ಕಾರಣಗಳಿರಬಹುದು. ಅವರು ಏನೂ ಹೇಳಿದ್ದರೂ ನಡೆಯುತ್ತೆ. ನಾವು ಹೇಳಿದರೆ ನಡೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಹನಿಟ್ರ್ಯಾಪ್ ಮತ್ತು ಡಿಸಿಎಂ ವಿರುದ್ಧ ಮಾತನಾಡಿರುವುದು ಕೂಡ ನನ್ನನ್ನು ತೆಗೆಯಲು ಕಾರಣವಾಗಿರಬಹುದು. ಯಾವುದು ಏನೇ ಇದ್ದರು ಅಂತಿಮವಾಗಿ ಸತ್ಯ ಗೆಲ್ಲುತ್ತದೆ ಎಂದು ಹೇಳಿದರು.
ಇನ್ನು ರಾಜಣ್ಣ ಬಿಜೆಪಿ ಅಥವಾ ಜೆಡಿಎಸ್ ಪಕ್ಷದತ್ತ ಮುಖಮಾಡುವರೇ? ಎಂಬ ಪ್ರಶ್ನೆಗೆ ನಾನು ಬೇರೆ ಪಕ್ಷಕ್ಕೆ ಹೋಗಲ್ಲ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ನನಗೆ ಬೇರೆ ಪಕ್ಷಕ್ಕೆ ಸೇರಬೇಕಾದ ಅವಶ್ಯಕತೆ ಇಲ್ಲ, ಬೇರೆ ಕಡೆ ಹೋಗುವುದೂ ಇಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ನನ್ನ ಕೆಲಸ ವನ್ನು ಮಾಡುತ್ತೇನೆ ಎಂದು ಹೇಳಿದರು.