ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕನ ಕಳ್ಳಾಟ: 10 ವರ್ಷದ ಹಿಂದಿನ ವಿಡಿಯೋ ಮತ್ತೆ ವೈರಲ್

ಆಸ್ಟ್ರೇಲಿಯಾ​: ಇದು 10 ವರ್ಷಗಳ ಹಿಂದೆ ನಡೆದ ತಮಾಷೆಯ ಘಟನೆಯಾಗಿದ್ದು, ಇದೀಗ ದಶಕ ಪೂರೈಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ ಇದಾಗಿದೆ. ಆಸ್ಟ್ರೇಲಿಯನ್ ವ್ಯಕ್ತಿ ಪೊಲೀಸ್ ಅಧಿಕಾರಿಯೊಂದಿಗೆ ಕುಡಿದು ಜಗಳವಾಡಿದ ದೃಶ್ಯ ಇದಾಗಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಆಸ್ಟ್ರೇಲಿಯಾದ ರಿಯಾಲಿಟಿ ಟಿವಿ ಶೋ ಹೈವೇ ಪ್ಯಾಟ್ರೋಲ್‌ನಿಂದ ತೆಗೆದುಕೊಳ್ಳಲಾಗಿದೆ.

ಕ್ಲಿಂಟನ್​ ಎಂಬಾತ ವಿಪರೀತ ಕುಡಿದು ಚಾಲನೆ ಮಾಡುತ್ತಿದ್ದ. ಆತನ ಕಾರು ಪಂಚರ್​ ಆಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಅಲ್ಲಿಗೆ ಬಂದ ಪೊಲೀಸರನ್ನು ಕಂಡು ಆತ ಕಕ್ಕಾಬಿಕ್ಕಿಯಾದ. ಕಾರು ಪಂಕ್ಚರ್​ ಆಗಿದೆ ಎಂದು ಹೇಳಿದರೆ, ಪೊಲೀಸರು ತನಿಖೆ ಮಾಡುತ್ತಾರೆ, ಆಗ ತಾನು ಕುಡಿದದ್ದು ತಿಳಿಯುತ್ತದೆ ಎಂದು ಅಂದುಕೊಂಡ ಆತ ಅದರಿಂದ ತಪ್ಪಿಸಿಕೊಳ್ಳಲು ತಾನು ಸಂಗಾತಿಗೆ ವೇಟ್​ ಮಾಡುತ್ತಿರುವುದಾಗಿ ಪದೇ ಪದೇ ಹೇಳುತ್ತಿರುವುದನ್ನು ವಿಡಿಯೋದಲ್ಲಿನೋಡಬಹುದು.

ಸಂಗಾತಿ ಹೆಸರು ಕೇಳಿದಾಗ ಕಕ್ಕಾಬಿಕ್ಕಿಯಾದ ಆತ ಜೇಮ್ಸ್​ ಎಂದ. ಇದರಿಂದ ಸಂದೇಹಗೊಂಡ ಪೊಲೀಸರು ಕೊನೆಗೂ ಆತನ ಬಾಯಿ ಬಿಡಿಸಿದ್ದರು. ಅವನ ಪರವಾನಗಿ ರದ್ದುಗೊಳಿಸಲಾಗಿತ್ತು. ದಶಕ ಪೂರೈಸಿದ ಹಿನ್ನೆಲೆಯಲ್ಲಿ ಮತ್ತೆ ಇದು ವೈರಲ್​ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read