JUST IN: ಜರ್ಮನಿಯಲ್ಲಿ ಭಾರೀ ಗುಂಡಿನ ದಾಳಿ: ಹಲವರು ಸಾವು

ಜರ್ಮನಿಯ ಬಾಡೆನ್-ವುರ್ಟೆಂಬರ್ಗ್ ರಾಜ್ಯದ ಲೌಟ್ಲಿಂಗನ್ ಪಟ್ಟಣದಲ್ಲಿ ಭಾನುವಾರ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಹಲವಾರು ಜನ ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.

ಜುಲೈ 15 ರಂದು ಒಲಿಂಪಿಯಾಸ್ಟೇಡಿಯನ್ ಬರ್ಲಿನ್ ಸ್ಟೇಡಿಯಂನಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ನಡುವಿನ ಯುರೋ ಕಪ್ ಫೈನಲ್‌ಗೆ ಸ್ವಲ್ಪ ಮೊದಲು ಈ ಆಘಾತಕಾರಿ ಘಟನೆ ಸಂಭವಿಸಿದೆ.

ಜರ್ಮನಿಯ ಬಿಲ್ಡ್ ಪತ್ರಿಕೆಯ ಪ್ರಕಾರ, ಸಾಮೂಹಿಕ ಹತ್ಯೆಗೆ ಬೇಟೆಗಾರನು ಕಾರಣ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ವಿವರಗಳನ್ನು ನೀಡಿಲ್ಲ. ಗುಂಡಿನ ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಸಾವುಗಳನ್ನು ದೃಢಪಡಿಸಿದ್ದಾರೆ. ಆದರೆ, ಇನ್ನೂ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಹತ್ತಾರು ತುರ್ತು ವಾಹನಗಳು ಮತ್ತು ಎರಡು ರಕ್ಷಣಾ ಹೆಲಿಕಾಪ್ಟರ್‌ಗಳು ಘಟನಾ ಸ್ಥಳಕ್ಕೆ ಹೋಗುತ್ತಿವೆ. ಶಂಕಿತ ದುಷ್ಕರ್ಮಿ ಬೇಟೆಗಾರ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read