ಶೂಟಿಂಗ್ ವೇಳೆ ನಟ ಜೂನಿಯರ್ ‘ಎನ್ ಟಿ ಆರ್’ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.ಅವರ ಕಾಲಿನ ಮೂಳೆಗೆ ಪೆಟ್ಟಾಗಿರುವುದರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಟನಿಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ಚೇತರಿಕೆಗಾಗಿ RRR ನಟನಿಗೆ ಎರಡು ವಾರಗಳ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಎನ್ಟಿಆರ್ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಸಣ್ಣಪುಟ್ಟ ಗಾಯ ಮಾಡಿಕೊಂಡರು. ವೈದ್ಯಕೀಯ ಸಲಹೆಯ ಮೇರೆಗೆ, ಅವರು ಸಂಪೂರ್ಣ ಗುಣಮುಖರಾಗಲು ಮುಂದಿನ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.” ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಂಡವು ಭರವಸೆ ನೀಡಿದೆ.. ಅಭಿಮಾನಿಗಳು, ಮಾಧ್ಯಮಗಳು ಮತ್ತು ಸಾರ್ವಜನಿಕರು ಯಾವುದೇ ಊಹಾಪೋಹಗಳಿಂದ ದೂರವಿರಬೇಕೆಂದು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ” ಎಂದು ತಂಡ ಹೇಳಿಕೆ ಮುಕ್ತಾಯಗೊಳಿಸಿದೆ.