ಜೋಡಿ ಆಪ್ ನಲ್ಲಿ ಪರಿಚಯ: ವಿವಾಹಿತನ ಜೊತೆ ಮಹಿಳೆಗೆ ಪ್ರೇಮಾಂಕುರ: ಮದುವೆಗಾಗಿ ಕಳ್ಳತನ ಐಡಿಯಾ ಕೊಟ್ಟ ಪ್ರೇಯಸಿ

ಬೆಂಗಳೂರು: ಜೋಡಿ ಆಪ್ ನಲ್ಲಿ ಪರಿಚಯವಾದ ಜೋಡಿ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡು ಮೂಲದ ನಾರಾಯಣಸ್ವಾಮಿ (34) ಎಂಬಾತನಿಗೆ ನವೀತಾ (39) ಎಂಬ ಮಹಿಳೆ ಜೋಡಿ ಆಪ್ ನಲ್ಲಿ ಪರಿಚಯವಾಗಿದ್ದಾಳೆ. ಇಬ್ಬರಿಗೂ ಅದಾಗಲೇ ವಿವಾಹವಾಗಿತ್ತು. ಆದರೆ ನಾರಾಯಣಸ್ವಾಮಿ ಪತ್ನಿಗೆ ಪ್ಯಾರಲಿಸಿಸ್ ಆಗಿತ್ತು. ಇತ್ತ ನವೀತಾ ಪತಿಗೂ ಪ್ಯಾರಲಿಸಿಸ್ ಆಗಿತ್ತು. ಇಬ್ಬರ ಪರಿಚಯ ಪ್ರೇಮವಾಗಿ ಮಾರ್ಪಟ್ಟಿದೆ. ಮಕ್ಕಳನ್ನು ಬಿಟ್ಟು ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಇಬ್ಬರಿಗೂ ಹಣದ ಸಮಸ್ಯೆ ಎದುರಾಗಿದೆ.

ಮದುವೆಗೆ ಹಣ ಹೊಂದಿಸಲು ಪ್ರೇಯಸಿ ನವೀತಾ, ನಾರಾಯಣಸ್ವಾಮಿಗೆ ಕಳ್ಳತನದ ಐಡಿಯಾ ಹೇಳಿದ್ದಾಳೆ. ನಾರಾಯಣಸ್ವಾಮಿ ತಾಯಿ ಬೆಳ್ಳಿಯಮ್ಮ ಲಕ್ಕಸಂದ್ರದಲ್ಲಿ ಮನೆ ಕೆಲಸ ಮಾಡುತ್ತಿದ್ದರು. ತಾಯಿ ಕೆಲಸ ಮಾಡುತ್ತಿದ್ದ ಮನೆಗೆ ನಾರಾಯಣಸ್ವಾಮಿ ಆಗಾಗ ಭೇಟಿ ನೀಡುತ್ತಿದ್ದ. ಮನೆಯಲ್ಲಿ ಹಣ, ಚಿನ್ನಾಭರಣವಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದ. ಅದರಂತೆ ಅದೇ ಮನೆಯಿಂದ 330 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾನೆ.

ಕದ್ದ ಚಿನ್ನವನ್ನು ನಾರಾಯಣಸ್ವಾಮಿ ಹಾಗೂ ನವೀತಾ ಬೇರೆ ಬೇರೆ ಕಡೆ ಅಡವಿಟ್ಟು ಹಣ ಪಡೆದಿದ್ದರು. ಹಣ ಪಡೆದು ನಾರಾಯಣಸ್ವಾಮಿ ಹೆಂಡತಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಪರಾರಿಯಾಗಿದ್ದ. ಅತ್ತ ನವೀತಾ ಕೂಡ ಪತಿ ಬಿಟ್ಟು ಚೆನ್ನೈ ಸೇರಿದ್ದಳು. ಇಬ್ಬರೂ ಅಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಮನೆಯಲ್ಲಿದ್ದ ಚಿನ್ನಾಭರಣ ಕಳುವಾದ ಬಗ್ಗೆ ಮನೆ ಮಾಲೀಕ ರಿಹಾನ್ ಅಸ್ಮ, ನಾರಾಯಣಸ್ವಾಮಿ ಮೇಲೆ ಅನುಮಾನಗೊಂಡು ಆಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೋಡಿಯನ್ನು ಪತ್ತೆ ಮಾಡಿ ಬಂಧಿಸಿದ್ದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read