JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಅಗ್ನಿವೀರ್’ ವಾಯು ನೇಮಕಾತಿಗೆ ಅಧಿಸೂಚನೆ ಬಿಡುಗಡೆ, ಜ. 17ರಿಂದ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ : ಭಾರತೀಯ ವಾಯುಪಡೆ (ಐಎಎಫ್) ತನ್ನ ಅಗ್ನಿವೀರವಾಯು ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಅರ್ಹ ಅಭ್ಯರ್ಥಿಗಳು ಜನವರಿ 17, 2024 ರಿಂದ ಪ್ರವೇಶ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಸಲು ಮತ್ತು ಪರೀಕ್ಷಾ ಶುಲ್ಕವನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 6, 2024 ಆಗಿದೆ. ಪ್ರವೇಶ ಪರೀಕ್ಷೆಯನ್ನು ಮಾರ್ಚ್ 17, 2024 ರಂದು ನಡೆಸಲು ನಿರ್ಧರಿಸಲಾಗಿದೆ.

ಅಗ್ನಿವೀರವಾಯು ನೇಮಕಾತಿಗೆ ಅರ್ಹತೆ

17.5 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳು ಅಗ್ನಿವೀರವಾಯು ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ವಿಜ್ಞಾನ ವಿಷಯಗಳಿಗೆ ಅರ್ಹತಾ ಮಾನದಂಡಗಳು

ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ನೊಂದಿಗೆ 10+2 ಇಂಟರ್ ಮೀಡಿಯೇಟ್, ಕನಿಷ್ಠ 50% ಅಂಕಗಳು ಮತ್ತು ಇಂಗ್ಲಿಷ್ ನಲ್ಲಿ 50% ಅಂಕಗಳೊಂದಿಗೆ. ಅಥವಾಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ 3 ವರ್ಷದ ಡಿಪ್ಲೊಮಾವನ್ನು ಕನಿಷ್ಠ 50% ಅಂಕಗಳೊಂದಿಗೆ ಮತ್ತು ಇಂಗ್ಲಿಷ್ನಲ್ಲಿ 50% ಅಂಕಗಳೊಂದಿಗೆ ಡಿಪ್ಲೊಮಾ ಕೋರ್ಸ್ನಲ್ಲಿ ಪೂರ್ಣಗೊಳಿಸಿರಬೇಕು. ಅಥವಾಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಭೌತಶಾಸ್ತ್ರ ಮತ್ತು ಗಣಿತದೊಂದಿಗೆ 2 ವರ್ಷದ ವೃತ್ತಿ ಕೋರ್ಸ್ ಅನ್ನು ಒಟ್ಟು 50% ಅಂಕಗಳೊಂದಿಗೆ ಮತ್ತು ಇಂಗ್ಲಿಷ್ನಲ್ಲಿ 50% ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

ವಿಜ್ಞಾನೇತರ ವಿಷಯಗಳಿಗೆ ಅರ್ಹತಾ ಮಾನದಂಡಗಳು

10+2 ಇಂಟರ್ ಮೀಡಿಯೇಟ್ ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಮತ್ತು ಇಂಗ್ಲಿಷ್ ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಇಂಗ್ಲಿಷ್ ನಲ್ಲಿ ಕನಿಷ್ಠ 50% ಅಂಕಗಳು ಮತ್ತು 50% ಅಂಕಗಳೊಂದಿಗೆ 2 ವರ್ಷದ ವೃತ್ತಿ ಕೋರ್ಸ್.

ಅಗ್ನಿವೀರವಾಯು ಪರೀಕ್ಷೆ ಶುಲ್ಕ

ಅರ್ಜಿ ಶುಲ್ಕ: ಸಾಮಾನ್ಯ/ಓಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 550 ರೂ., ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 550 ರೂ. ಅರ್ಜಿದಾರರು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು.

ಆನ್ಲೈನ್ ಪರೀಕ್ಷೆಯ ಅವಧಿ: 85 ನಿಮಿಷಗಳು

ವಿಷಯಗಳು: ಭೌತಶಾಸ್ತ್ರ, ಗಣಿತ, ಇಂಗ್ಲಿಷ್ (10+2 CBSE ಪಠ್ಯಕ್ರಮದ ಪ್ರಕಾರ), ರೀಸನಿಂಗ್ ಮತ್ತು ಸಾಮಾನ್ಯ ಅರಿವು (RAGA)
ಪ್ರತಿ ಸರಿಯಾದ ಉತ್ತರ: 1 ಅಂಕ
ಪ್ರತಿ ತಪ್ಪಾದ ಉತ್ತರಕ್ಕೆ ಕಡಿತ: 0.25 ಅಂಕ

ಹೆಚ್ಚಿನ ಮಾಹಿತಿಗಾಗಿ  https://agnipathvayu.cdac.in/AV/img/upcoming/AGNIVEER_VAYU_01-2025.pdf  ವೀಕ್ಷಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read