JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ನಾಳೆ ಕೊಪ್ಪಳದಲ್ಲಿ ‘ನೇರ ಸಂದರ್ಶನ’ ಆಯೋಜನೆ

ಕೊಪ್ಪಳ : ಕೊಪ್ಪಳದಲ್ಲಿ ನಾಳೆ (ಜನವರಿ 10) ನೇರ ಸಂದರ್ಶನ ಆಯೋಜಿಸಲಾಗಿದ್ದು, ನಿರುದ್ಯೋಗಿ ಯುವಕ ಮತ್ತು ಯುವತಿಯರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕೊಪ್ಪಳ ನಗರದ ಭೂಮಿ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ನಲ್ಲಿ ನಾಳೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಾಕ್ ಇನ್ ಸಂದರ್ಶನ ನಡೆಯಲಿದೆ. ಉಪನ್ಯಾಸಕ/ ಉಪನ್ಯಾಸಕಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ ಪ್ರತಿಗಳು, ಆಧಾರ್ ಕಾರ್ಡ್  ತೆಗೆದುಕೊಂಡು ಬರಲು ಸೂಚನೆ ನೀಡಲಾಗಿದೆ.

ಅರ್ಹತೆ : ಬಿ.ಎ.-ಬಿಎಡ್ ಅಥವಾ ಎಂ.ಎ.-ಬಿಎಡ್, ಬಿ.ಎಸ್ಸಿ.-ಬಿಎಡ್(ಕೆಮಿಸ್ಟ್ರಿ) ಅಥವಾ ಎಂ.ಎಸ್ಸಿ.-ಬಿಎಡ್(ಕೆಮಿಸ್ಟ್ರಿ), ಬಿ.ಎಸ್ಸಿ.-ಬಿಎಡ್(ಫಿಜಿಕ್ಸ್) ಅಥವಾ ಎಂ.ಎಸ್ಸಿ.-ಬಿಎಡ್(ಫಿಜಿಕ್ಸ್) ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ : 21 ರಿಂದ 30 ವರ್ಷಗಳು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಕಛೇರಿಯನ್ನು ಸಂಪರ್ಕಿಸಬಹುದು. ಅಥವಾ 8105693234 ಸಂಪರ್ಕಿಸಬಹುದಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read