ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) 66 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರನ್ನು ಸರಿಕೆಲ್ಲಾ, ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರನ್ನು ಧನ್ವರ್ ಮತ್ತು ಸೀತಾ ಸೊರೆನ್ ಅವರನ್ನು ಜಮ್ತಾರಾದಿಂದ ಕಣಕ್ಕಿಳಿಸಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಇತ್ತೀಚೆಗೆ ಅನರ್ಹಗೊಂಡಿರುವ ಶಾಸಕ ಲೋಬಿನ್ ಹೆಂಬ್ರೋಮ್ ಅವರಿಗೆ ಬೋರಿಯೊದಿಂದ ಟಿಕೆಟ್ ನೀಡಲಾಗಿದೆ.
ಚೈಬಾಸಾದಿಂದ ಗೀತಾ ಬಲ್ಮುಚು, ಜಗನಾಥಪುರದಿಂದ ಗೀತಾ ಕೋಡಾ ಮತ್ತು ಪೊಟ್ಕಾದಿಂದ ಮೀರಾ ಮುಂಡಾ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯು ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.
https://twitter.com/ANI/status/1847632880459272633