ಸಾಹಸ ಕ್ರೀಡೆಗಳಲ್ಲಿ ತೊಡಗಿರುವವರಿಗೆ ಅಥವಾ ಥ್ರಿಲ್-ಸೀಕಿಂಗ್ ಹುಚ್ಚು ಇರುವವರಿಗೆ ಯಾವುದೇ ಭಯವಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿದೆ. ಇದು ಕೆಲವರಿಗೆ ನಿಜವಾಗಬಹುದು ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಹೀಗಾಗುವುದಿಲ್ಲ. ಅವರೂ ಭಯಭೀತರಾಗುವ ಸಂದರ್ಭಗಳು ಬರುತ್ತವೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಜೆಟ್ ಸ್ಕೀಯಲ್ಲಿದ್ದ ವ್ಯಕ್ತಿಯೊಬ್ಬರು ನೀರಿನ ಮಧ್ಯದಲ್ಲಿರುವ ಮತ್ತೊಬ್ಬ ವ್ಯಕ್ತಿಯನ್ನು ತಲುಪುತ್ತಿರುವಾಗ ಬೃಹತ್ ಅಲೆಯು ವೇಗವಾಗಿ ಬರುತ್ತಿರುವ ಭಯಾನಕ ವಿಡಿಯೋ ಇದಾಗಿದೆ. ಅಲೆಯು ಅವರಿಬ್ಬರನ್ನೂ ಆವರಿಸಿಕೊಳ್ಳುವ ಮೊದಲು ಜೆಟ್ ಸ್ಕೀ ಸವಾರನು ಸಮುದ್ರದಲ್ಲಿ ಮನುಷ್ಯನನ್ನು ಹಿಡಿಯಬೇಕಿತ್ತು. ಇಲ್ಲದಿದ್ದರೆ ಆತ ಮುಳುಗುವ ಸಾಧ್ಯತೆ ಇತ್ತು.
ಅರೆಕ್ಷಣ ಹೆಚ್ಚೂ ಕಡಿಮೆಯಾದರೂ ಅಪಾಯ ಕಟ್ಟಿಟ್ಟದ್ದಾಗಿತ್ತು. ಆದರೆ ಆ ಕ್ಷಣದಲ್ಲಿ ವ್ಯಕ್ತಿಯನ್ನು ರಕ್ಷಿಸುವಲ್ಲ ಜೆಟ್ ಸ್ಕೀ ಸವಾರ ಯಶಸ್ವಿಯಾಗಿದ್ದಾನೆ. ಈ ವಿಡಿಯೋವನ್ನು Twitter ನಲ್ಲಿ @LovePower_page ಮೂಲಕ “ವಾಹ್!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಮತ್ತು ಕೆಲವೇ ಗಂಟೆಗಳಲ್ಲಿ 1.4 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
https://twitter.com/LovePower_page/status/1616372927573954561?ref_src=twsrc%5Etfw%7Ctwcamp%5Etweetembed%7Ctwterm%5E1616372927573954561%7Ctwgr%5E40e9f6d26f3393dd971a5e4457d73c734d4e5110%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-jet-ski-rider-braves-monstrous-sea-wave-to-save-drowning-man-5863779%2F