ಈ ವಯಸ್ಸಿನವರೆಗೆ ನಿರಾಳವಾಗಿ ಧರಿಸಬಹುದು ಜೀನ್ಸ್

ಇದು ಫ್ಯಾಷನ್ ಯುಗ. ದಿನಕ್ಕೊಂದು ಹೊಸ ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡ್ತಾ ಇದೆ. ಈ ನಡುವೆಯೂ ಜನ ಜೀನ್ಸ್ ಬಿಟ್ಟಿಲ್ಲ. ಬೇರೆ ಬೇರೆ ವಿನ್ಯಾಸದ ಜೀನ್ಸ್ ತೊಡುತ್ತಿದ್ದಾರೆ. ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಜೀನ್ಸ್ ಹಾಕಿಕೊಳ್ತಾರೆ. ಆದ್ರೆ ಯಾವ ವಯಸ್ಸಿನಲ್ಲಿ ಜೀನ್ಸ್ ಹಾಕಿಕೊಳ್ಳೋದನ್ನು ಬಿಡೋದು ಬೆಸ್ಟ್ ಎಂಬುದನ್ನು ಸಂಶೋಧನೆಯೊಂದು ಹೇಳಿದೆ.

ಸಾಮಾನ್ಯವಾಗಿ ಯುವ ಜನತೆ ಮಾತ್ರ ಜೀನ್ಸ್ ತೊಟ್ಟರೆ ಚೆಂದ ಎಂಬ ಮಾತುಗಳಿವೆ. ಆದ್ರೆ ಸಂಶೋಧನೆ 53 ವರ್ಷದವರೆಗೆ ನಿರಾಳವಾಗಿ ಜೀನ್ಸ್ ಹಾಕಿಕೊಳ್ಳಬಹುದು ಎನ್ನುತ್ತದೆ. ಎಲ್ಲಿಯವರೆಗೆ ಜೀನ್ಸ್ ತೊಟ್ಟರೆ ಕಿರಿಕಿರಿ, ಮುಜುಗರ ಅನ್ನಿಸುವುದಿಲ್ಲವೋ ಅಲ್ಲಿಯವರೆಗೆ ಜೀನ್ಸ್ ಹಾಕಿಕೊಳ್ಳುವುದು ಒಳ್ಳೆಯದು ಎನ್ನುತ್ತದೆ ಫ್ಯಾಷನ್ ವಿಶ್ವವಿದ್ಯಾನಿಲಯ.

ಸಂಶೋಧನೆಗೆ ಎಲ್ಲ ವಯಸ್ಸಿನವರ ಅಭಿಪ್ರಾಯವನ್ನು ಪಡೆಯಲಾಗಿದ್ದು. ಇದ್ರಲ್ಲಿ ಅನೇಕರು ಫಿಟ್ ಆಗುವ ಜೀನ್ಸ್ ಆಯ್ಕೆ ಮಾಡುವುದು ಕಷ್ಟ ಎಂದಿದ್ದಾರೆ. ಜೊತೆಗೆ ಒಂದೇ ಜೀನ್ಸ್ 2-3 ವರ್ಷ ಬಳಸುವುದಾಗಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read