JDS ನಿಘಂಟಿನಲ್ಲಿರುವುದು ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೊಸ್ಕರ; ಸಿ.ಟಿ. ರವಿ ವ್ಯಂಗ್ಯ

ಜಾತ್ಯಾತೀತ ಜನತಾದಳದ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಜೆಡಿಎಸ್ ನಿಘಂಟಿನಲ್ಲಿರುವುದು ಕುಟುಂಬದಿಂದ, ಕುಟುಂಬಕ್ಕಾಗಿ ಹಾಗೂ ಕುಟುಂಬಕೋಸ್ಕರ ಮಾತ್ರ ಎಂದು ಲೇವಡಿ ಮಾಡಿದ್ದಾರೆ.

ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಯುವ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನದಲ್ಲಿ ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಎಂದು ಇದೆ. ಆದರೆ ಅದನ್ನು ಕುಮಾರಣ್ಣ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದರು.

ಒಂದು ವೇಳೆ ಕುಮಾರಣ್ಣನ ಕುಟುಂಬದಲ್ಲಿ 224 ಜನರಿದ್ದಿದ್ದರೆ ಅವರುಗಳಿಗೆ ಅಭ್ಯರ್ಥಿ ಹುಡುಕುವ ತಾಪತ್ರಯವೇ ಬರುತ್ತಿರಲಿಲ್ಲ ಎಂದು ಹೇಳಿದ ಸಿ.ಟಿ. ರವಿ, ಹಾಸನದಲ್ಲಿ ಜಗಳ ನಡೆಯುತ್ತಿರುವುದು ದೇಶ, ರಾಜ್ಯದ ಅಭಿವೃದ್ಧಿಗಾಗಿ ಅಲ್ಲ, ಕುಟುಂಬಕ್ಕಾಗಿ ಎಂದು ಕುಟುಕಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read