BIG NEWS: ಜೆಸಿಬಿ ವಾಹನ ಹಾಗೂ ಬಸ್ ನಡುವೆ ಭೀಕರ ಅಪಘಾತ: 8 ಜನರಿಗೆ ಗಂಭೀರ ಗಾಯ

ವಿಜಯನಗರ: ಜೆಸಿಬಿ ವಾಹನಕ್ಕೆ ವಿ.ಆರ್.ಎಲ್ ಬಸ್ ಡಿಕ್ಕಿ ಹೊಡೆದ ಪರಿಣಾಮ 8 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ನಡೆದಿದೆ.

ಹಾರುವನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಜೆಸಿಬಿ ವಾಹನಕ್ಕೆ ವಿ.ಆರ್.ಎಲ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಜೆಸಿಬಿ ಕೂಡ ಕಂದಕಕ್ಕೆ ಬಿದ್ದಿದೆ. ಪರಿಣಾಮ 8 ಜನರು ಗಾಯಗೊಂಡಿದ್ದಾರೆ.

ಬಸ್ ಚಾಲಕ ಹಾಗೂ 6 ಪ್ರಯಾಣಿಕರು, ಜೆಸಿಬಿ ಚಾಲಕ ಹಾಗೂ ಇನ್ನೋರ್ವ ಸೇರಿದಂತೆ 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read