ಟೋಕಿಯೋ: ಜಪಾನ್ ಸಂಸತ್ತಿನಲ್ಲಿ ತಮ್ಮ ಪಕ್ಷಕ್ಕೆ ಭಾರಿ ಚುನಾವಣಾ ಹಿನ್ನಡೆ ಉಂಟಾದ ಒಂದು ತಿಂಗಳ ನಂತರ ಜಪಾನ್ ಪ್ರಧಾನಿ ಇಶಿಬಾ ಶಿಗೇರು ಭಾನುವಾರ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಜುಲೈ ಆರಂಭದಲ್ಲಿ, ಜಪಾನ್ ಸಂಸತ್ತಿನ ಮೇಲ್ಮನೆಯಲ್ಲಿ ಗಮನಾರ್ಹ ಚುನಾವಣಾ ಸೋಲಿನ ನಂತರ ಇಶಿಬಾ ಅವರ ಒಕ್ಕೂಟವು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣ ಅವರಿಗೆ ದೊಡ್ಡ ಹಿನ್ನಡೆಯಾಗಿತ್ತು. ಕಳೆದ ವರ್ಷ ಅವರ ಪಕ್ಷವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಪಡೆಯುವಲ್ಲಿ ವಿಫಲವಾದ ನಂತರ ಈ ಬೆಳವಣಿಗೆ ನಡೆದಿದೆ.
ಜಪಾನಿನ ಪ್ರಧಾನಿ ಶಿಗೇರು ಇಶಿಬಾ ಅವರು ಭಾನುವಾರ ತಮ್ಮ ರಾಜೀನಾಮೆ ನಿರ್ಧಾರವನ್ನು ದೃಢಪಡಿಸಿದರು, ಇದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ (LDP)ದೊಳಗಿನ ವಿಭಜನೆಯನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಜಪಾನಿನ ದೂರದರ್ಶನ ವರದಿ ಮಾಡಿದೆ. ಜುಲೈನಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ LDP ಮತ್ತು ಅದರ ಸಮ್ಮಿಶ್ರ ಪಾಲುದಾರ ಕೊಮೈಟೊಗೆ ಗಮನಾರ್ಹ ಸೋಲಿನ ನಂತರ ರಾಜೀನಾಮೆ ನೀಡಲಾಗಿದೆ.
ಜಪಾನ್ ಸಂಸತ್ತಿನ ಎರಡೂ ಸದನಗಳಲ್ಲಿ ಅವರ ಆಡಳಿತ ಒಕ್ಕೂಟವು ಬಹುಮತವನ್ನು ಕಳೆದುಕೊಳ್ಳಲು ಕಾರಣವಾದ ಈ ಪ್ರಮುಖ ಹಿನ್ನಡೆಯ ಹೊರತಾಗಿಯೂ, “ರಾಜಕೀಯ ಸ್ತಬ್ಧತೆ”ಯನ್ನು ತಪ್ಪಿಸಲು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿಯೇ ಇರುವುದಾಗಿ ಇಶಿಬಾ ಪ್ರತಿಜ್ಞೆ ಮಾಡಿದ್ದರು.
48 ಸದಸ್ಯ ಬಲದ ಮೇಲ್ಮನೆಯಲ್ಲಿ ಆಡಳಿತಾರೂಢ LDP-ಕೊಮೈಟೊ ಒಕ್ಕೂಟವು 141 ಸ್ಥಾನಗಳಿಂದ 122 ಸ್ಥಾನಗಳಿಗೆ ಕುಸಿದಿದ್ದು, ಸರಳ ಬಹುಮತದ ಕೊರತೆಯನ್ನು ಎದುರಿಸುತ್ತಿದೆ. ಕೆಳಮನೆಗಿಂತ ಕಡಿಮೆ ಶಕ್ತಿಶಾಲಿಯಾಗಿದ್ದರೂ, ಶಾಸನವನ್ನು ಅಂಗೀಕರಿಸುವಲ್ಲಿ ಮೇಲ್ಮನೆ ನಿರ್ಣಾಯಕವಾಗಿದೆ.