Bizarre: ನಾಯಿಯಂತೆ ಕಾಣಲು 13 ಲಕ್ಷ ರೂ. ಮೌಲ್ಯದ ಉಡುಪು ಧರಿಸಿದ ವ್ಯಕ್ತಿ….!

ನಾಯಿಯ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ವ್ಯಕ್ತಿಯೊಬ್ಬ ಮತ್ತೆ ಸುದ್ದಿಗೆ ಬಂದಿದ್ದಾನೆ. 13 ಲಕ್ಷಕ್ಕೂ ಹೆಚ್ಚು ಮೌಲ್ಯದ ವೇಷಭೂಷಣವನ್ನು ಧರಿಸಿದ್ದ ವ್ಯಕ್ತಿ, ಸ್ನೇಹಿತನೊಂದಿಗೆ  ಮಾನವ ಹಸ್ಕಿಯಂತೆ ಕಾಣಿಸಿಕೊಂಡಿದ್ದಾನೆ. ಟೋಕೊ ಎಂಬ ಪ್ರಸಿದ್ಧ ಯೂಟ್ಯೂಬರ್ ನಾಯಿಯಂತೆ ಜೀವನವನ್ನು ನಡೆಸುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಚಿತ್ರ ವೇಷ ಭೂಷಣದಿಂದಲೇ ಆತ ಪ್ರಸಿದ್ಧಿ ಪಡೆದಿದ್ದಾನೆ.

ಟೋಕೊ ಇತ್ತೀಚಿಗೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಆತನ ಸ್ನೇಹಿತ ಕೂಡ ಕಾಣಿಸಿಕೊಂಡಿದ್ದು, ಇಬ್ಬರು ಹಾಡಿಗೆ ಡಾನ್ಸ್‌ ಮಾಡ್ತಿರೋದನ್ನು ನೀವು ನೋಡ್ಬಹುದು. ಇಬ್ಬರೂ ಹಸ್ಕಿ ನಾಯಿಯ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ.

ಸರಳವಾಗಿ  ಪೋಕ್ ಡ್ಯಾನ್ಸ್  ಎಂಬ ಶೀರ್ಷಿಕೆಯ ವಿಡಿಯೋ ಹಂಚಿಕೊಳ್ಳಲಾಗಿದೆ.  ಐ ವಾಂಟ್ ಟು ಬಿ ಆನ್ ಅನಿಮಲ್‌ ಯುಟ್ಯೂಬ್‌ ಚಾನೆಲ್‌ ನಲ್ಲಿ ವಿಡಿಯೋ ಪೋಸ್ಟ್‌ ಆಗಿದ್ದು, ಈವರೆಗೆ 70,000 ಅನುಯಾಯಿಗಳು ಇವರು ಹೊಂದಿದ್ದಾರೆ.

2022 ರಲ್ಲಿ ಜರ್ಮನ್ ಟಿವಿ ಸ್ಟೇಷನ್‌ಗೆ ಸಂದರ್ಶನಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮನುಷ್ಯನ ಗಾತ್ರದ ಪ್ರಾಣಿ ಕೋಲಾಹಲವನ್ನು ಉಂಟುಮಾಡಿತ್ತು. ನಂತ್ರ ನಾಯಿ ವೇಷದಲ್ಲಿರುವ ವ್ಯಕ್ತಿ ಟೋಕೊ ಎಂಬುದು ಜನರಿಗೆ ಗೊತ್ತಾಯ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read