Viral Video | ಶಾರೂಕ್​​ ಖಾನ್ ಹಾಡಿಗೆ ಹೆಜ್ಜೆ ಹಾಕಿದ ಜಪಾನ್‌ ಯುವಕ

ಕಾಕೇಟಕು ಎಂಬ ಜಪಾನಿನ ವ್ಯಕ್ತಿಯೊಬ್ಬರು ಬಾಲಿವುಡ್‌ನ ಮೇಲೆ ತಮಗಿರುವ ಪ್ರೀತಿಯನ್ನು ಭರ್ಜರಿ ಡ್ಯಾನ್ಸ್ ಮೂಲಕ ಬಹಿರಂಗಗೊಳಿಸಿದ್ದಾರೆ. ಶಾರುಖ್ ಖಾನ್ ಅವರು ನಟಿಸಿರುವ ಬ್ಲಾಕ್‌ಬಸ್ಟರ್ ಚಿತ್ರ ‘ಜವಾನ್’ ನ ಹಿಟ್ ಹಾಡಾದ ‘ಚಲೇಯಾ’ ಗೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಎಲ್ಲರ ಗಮನಸೆಳೆಯಲು ಇನ್ನೊಂದು ಮುಖ್ಯ ಕಾರಣವೇನೆಂದರೆ ಗಮನಾರ್ಹವಾದ ಐಕಾನಿಕ್ ಟೋಕಿಯೋ ಟವರ್ ಮುಂದೆ ಈ ನೃತ್ಯ ಮಾಡಿರೋದು.

ಕಾಕೆಟಕು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದು, ಅವರ ಡ್ಯಾನ್ಸ್ ಕೌಶಲ್ಯವನ್ನು ತೋರ್ಪಡಿಸಿದೆ. ಇದರ ಜೊತೆ ಬಾಲಿವುಡ್ ಮೇಲೆ ಅವರಿಗಿರುವ ಪ್ರೀತಿ ಈ ಡ್ಯಾನ್ಸ್ ವಿಡಿಯೋದ ಮೂಲಕ ತಿಳಿದು ಬಂದಿದೆ.

ವಿಡಿಯೋದಲ್ಲಿ ನೃತ್ಯ ಸಂಯೋಜನೆ ಮಾಡಿದ ಖ್ಯಾತ ನೃತ್ಯ ಸಂಯೋಜಕಿ ಫರಾ ಖಾನ್ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಾದ ಅನೂಷಾ ಮತ್ತು ಸೌರಭ್ ಅವರಿಗೆ ಕಾಕೆಟಕು ಧನ್ಯವಾದವನ್ನು ಸಹ ಸಲ್ಲಿಸಿದ್ದಾರೆ.

ಈ ಅದ್ಭುತ ಡ್ಯಾನ್ಸ್ ವಿಡಿಯೋ ಬಾಲಿವುಡ್ ಅಭಿಮಾನಿಗಳ ಹೃದಯ ಗೆಲ್ಲುವ ಜೊತೆ ಶಾರುಖ್‌ಖಾನ್ ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಕಾಕೆಟಕು ಅವರ ಅದ್ಬುತ ನಿರೂಪಣೆ ಕಲೆಯ ಶಕ್ತಿ ಮತ್ತು ಪ್ರಪಂಚದಾದ್ಯಂತ ಇರುವ ಸಂಸ್ಕೃತಿಗಳನ್ನು ಕನೆಕ್ಟ್ ಮಾಡುವುದಕ್ಕು ಸಾಕ್ಷಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read