ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ಬಹಿರಂಗ; 30 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿದಿದ್ದ 16 ಮಂದಿ ಅಂದರ್

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬಹಿರಂಗವಾಗಿದೆ. ಹಲವರನ್ನು ಒಳಗೊಂಡ ಗುಂಪು, ಕಳೆದ 30 ವರ್ಷಗಳ ಅವಧಿಯಲ್ಲಿ ಬಿಸಿನೀರ ಬುಗ್ಗೆಗಳಲ್ಲಿ ಸ್ನಾನ ಮಾಡುತ್ತಿದ್ದ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆ ಹಿಡಿದಿದ್ದು, ಇದೀಗ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ 16 ಮಂದಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ Saito ಎಂಬಾತ 2021ರ ಡಿಸೆಂಬರ್ ನಲ್ಲಿ ಬಂಧನಕೊಳಗಾಗಿದ್ದು ಆತ ನೀಡಿದ ಸುಳಿವಿನ ಮೇರೆಗೆ, ಇತರೆ 15 ಮಂದಿಯನ್ನು ಈಗ ಬಂಧಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಬಂಧಿತರಲ್ಲಿ ಕಂಪನಿಯ ಎಕ್ಸಿಕ್ಯೂಟಿವ್, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಹಾಗೂ ವೈದ್ಯನೂ ಸಹ ಸೇರಿದ್ದಾನೆ.

ಪ್ರಮುಖ ಆರೋಪಿ Saito 20 ವರ್ಷದ ಪ್ರಾಯದವನಿದ್ದಾಗ ಇಂತಹ ಕೆಲಸ ಆರಂಭಿಸಿದ್ದು, ಬಳಿಕ ಇತರರಿಗೂ ಇದನ್ನು ತಿಳಿಸಿಕೊಟ್ಟಿದ್ದ. ಇವರುಗಳು ಜಪಾನಿನ ವಿವಿಧ ಭಾಗಗಳಲ್ಲಿರುವ ಬಿಸಿನೀರ ಬುಗ್ಗೆ ಬಳಿ ಅತ್ಯಾಧುನಿಕ ಕ್ಯಾಮರಾ ಬಳಸಿ ಮಹಿಳೆಯರ ಸ್ನಾನದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

ಈ ವಿಡಿಯೋ ಹಾಗೂ ಫೋಟೋಗಳಿಗೆ ಸಬ್ ಟೈಟಲ್ ಕೂಡ ಹಾಕಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದರು ಎನ್ನಲಾಗಿದ್ದು, ಈ ರೀತಿ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ವಿಡಿಯೋ ಮಾಡಲಾಗಿದೆ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಅಕ್ರಮವಾಗಿ ಫೋಟೋ, ವಿಡಿಯೋ ತೆಗೆದಿರುವುದು, ಅಶ್ಲೀಲ ಚಿತ್ರ ತಯಾರಿ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read