ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಿಗ್ ಶಾಕ್: 77 ಆಸ್ತಿಗಳ ಜಪ್ತಿಗೆ ಆದೇಶ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಸ್ತಿ ಜಪ್ತಿಗೆ ಸಿಬಿಐ ಕೋರ್ಟ್ ಆದೇಶ ನೀಡಿದೆ. ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮಿ ಅರುಣಾ ಅವರ ಆಸ್ತಿ ಜಪ್ತಿ ಮಾಡುವಂತೆ ಆದೇಶ ನೀಡಲಾಗಿದೆ.

ಒಟ್ಟು 77 ಆಸ್ತಿಗಳ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿದ್ದು, ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ.

ಜನಾರ್ದನ ರೆಡ್ಡಿ ದಂಪತಿ ಆಸ್ತಿ ಜಪ್ತಿಗೆ ಕೋರಿ ಸಿಬಿಐನಿಂದ ಅರ್ಜಿ ಸಲ್ಲಿಸಸಲಾಗಿತ್ತು. ಇಬ್ಬರಿಗೂ ಸೇರಿದ ಒಟ್ಟು 124 ಆಸ್ತಿಗಳ ಜಪ್ಪಿಗೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಅಕ್ರಮವಾಗಿ ಗಳಿಸಿರುವ ಆಸ್ತಿ ಮಾತ್ರ ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಕ್ರಿಮಿನಲ್ ತಿದ್ದುಪಡಿ ಕಾಯ್ದೆಯಡಿ ಆದೇಶ ನೀಡಲಾಗಿದೆ. ಕ್ರಿಮಿನಲ್ ಅಮೆಂಡ್ಮೆಂಟ್ ಕಾಯ್ದೆಯಡಿ ರೆಡ್ಡಿ ಆಸ್ತಿಯನ್ನು ಜಪ್ತಿಗೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read