BIG NEWS: ಕೇಸರಿ ಪಾಳಯದಲ್ಲಿ ಬಂಡಾಯದ ಮೇಲೆ ಬಂಡಾಯ; ಸ್ನೇಹಿತನ ವಿರುದ್ಧವೇ ಸಿಡಿದೆದ್ದ ಶ್ರೀರಾಮುಲು; ಸುದ್ದಿಗೋಷ್ಠಿ ಕರೆದ ಜನಾರ್ಧನ ರೆಡ್ಡಿ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ, ಬಂಡಾಯದ ಮೇಲೆ ಬಂಡಾಯ ಶುರುವಾಗಿದೆ. ಸಂಡೂರು ಉಅಪಚುನಾವಣಾ ಸೋಲಿಗೆ ಮಾಜಿ ಸಚಿವ ಶ್ರೀರಾಮುಲು ಕಾರಣ ಎಂಬ ಆರೋಪವನ್ನು ಹೊರಿಸಲಾಗಿತ್ತು. ಇದರಿಂದ ಸಿಡಿದೆದ್ದಿದ್ದ ಶ್ರೀರಾಮುಲು, ಸ್ನೇಹಿತ ಜನಾರ್ಧನ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಸಂಡೂರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಗೆಲ್ಲಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅದಾಗ್ಯೂ ನನ್ನ ಮೇಲೆ ಆರೋಪ ಮಾಡುತಿರುವುದರ ಹಿಂದೆ ಷಡ್ಯಂತ್ರವಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ಧನ ರೆಡ್ಡಿ ಯತ್ನಿಸುತ್ತಿದ್ದಾರೆ. ಅವರೇ ಇಂತಹ ಅಪಪ್ರಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ನಾನು ಪಕ್ಷ ಬಡಲು ಸಿದ್ಧನಿದ್ದೇನೆ. ಪ್ರಾಮಾನಿಕವಾಗಿ ಕೆಲಸ ಮಾಡಿದರೂ ಆರೋಪ ಹೊರಿಸಬೇಡಿ ಎಂದು ನೊಂದು ನುಡಿದಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಶಾಸಕ ಜನಾರ್ಧನ ರೆಡ್ದಿ ಇಂದು ಸುದ್ದಿಗೋಷ್ಠಿ ಕರೆದಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ನಿವಾಸದಲ್ಲಿ ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read