BIG NEWS: ಶಾಸಕ ಜನಾರ್ಧನ ರೆಡ್ಡಿ ಕುಟೀರಕ್ಕೆ ಬೆಂಕಿ

ಕೊಪ್ಪಳ: ಮಾಜಿ ಸಚಿವ, ಕೆಆರ್ ಪಿಪಿ ಶಾಸಕ ಜನಾರ್ಧನ ರೆಡ್ಡಿ ಅವರ ಕುಟೀರಕ್ಕೆ ಬೆಂಕಿ ಬಿದ್ದಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದ ಬಳಿ ನಡೆದಿದೆ.

ಮಾಜಿ ಸಚಿವ ಜನಾರ್ಧನ ರೆಡ್ಡಿ, ತಾವು ಐತಿಹಾಸಿಕ ಪಂಪಾ ಸರೋವರ ಬಳಿ ಬಂದಾಗ ಉಳಿದುಕೊಳ್ಳಲೆಂದು ಕುಟೀರವೊಂದನ್ನು ನಿರ್ಮಿಸಿದ್ದರು. ಜನಾರ್ಧನ ರೆಡ್ಡಿ ಹಾಗೂ ಅವರ ಕುಟುಂಬ ಅಂಜನಾದ್ರಿ, ಪಂಪಾ ಸರೋವರಕ್ಕೆ ಬಂದಾಗ ಇದೇ ಕುಟೀರದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಕುಟೀರದಲ್ಲಿ ಅತ್ಯಾಧುನಿಕ ಸೌಕರ್ಯಗಳು ಇದ್ದವು. ಆದರೆ ಈ ಕುಟೀರಕ್ಕೆ ಇದೀಗ ಏಕಾಏಕಿ ಬೆಂಕಿ ಬಿದ್ದಿದ್ದು, ಕುಟೀರ ಹೊತ್ತಿ ಉರಿದಿದೆ.

ಕುಟೀರದ ಮೇಲೆ ಹುಲ್ಲಿನ ಹೊದಿಕೆ ಹೊದಿಸಲಾಗಿತ್ತು. ಇದರಿಂದಾಗಿ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಈಡೀ ಕುಟೀರವನ್ನು ಆವರಿಸಿದ್ದು, ಇಡೀ ಕುಟೀರ ಅಗ್ನಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read