ಶ್ರೀನಗರ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ತನಿಖಾ ತಂದಗಳು ಜಮ್ಮು-ಕಾಶ್ಮೀರದ ಹಲವೆಡೆ ದಾಳಿ ನಡೆಸಿವೆ.
ಉಗ್ರರ ಜೊತೆ ಸಂಪರ್ಕ ಹೊಂದಿದ್ದವರ ಮನೆಗಳ ಮೇಲೆ ಜಮ್ಮು-ಕಾಶ್ಮೀರ ತನಿಖಾ ತಂಡಗಳು ದಾಳಿ ನಡೆಸಿವೆ. ದಕ್ಷಿಣ ಕಾಶ್ಮೀರದ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಶೋಫಿಯಾನ್, ಕುಲ್ಗಾಮ್, ಪುಲ್ವಾಮ, ಅನಂತನಾಗ್ ಸೇರಿದಂತೆ ಹಲವೆಡೆ ತನಿಖಾ ತಂಡ ದಾಳಿ ನಡೆಸಿದ್ದು, ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.