ಸ್ವಾಸ್ಥ್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು. ಭವಿಷ್ಯದ ಪೀಳಿಗೆಯನ್ನು ರೂಪಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿರುತ್ತದೆ. ಆದರೆ ಅಂತಹ ಶಿಕ್ಷಕರೇ ಕುಕೃತ್ಯಗಳಲ್ಲಿ ತೊಡಗಿಕೊಂಡರೆ ಅವರುಗಳ ಬಳಿ ಕಲಿತ ವಿದ್ಯಾರ್ಥಿಗಳ ಕಥೆ ಏನು ?.
ಹೌದು, ಇಂತಹ ಶಿಕ್ಷಕನೊಬ್ಬನ ಕುರಿತ ವರದಿ ಇಲ್ಲಿದೆ. ಜಮ್ಮು-ಕಾಶ್ಮೀರದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈತ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಎಂಬುದು ಬಹಿರಂಗವಾಗಿದೆ
ರಿಯಾಸಿ ಜಿಲ್ಲೆಯ ಆರಿಫ್ ಬಂಧಿತ ಶಿಕ್ಷಕನಾಗಿದ್ದು, ಈತ ಜನವರಿ 21ರಂದು ಜಮ್ಮುವಿನ ನರವಾಲ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಈ ಸ್ಪೋಟ ನಡೆಸಲು ಪಾಕಿಸ್ತಾನದ ಉಗ್ರರು ಡ್ರೋನ್ ಮೂಲಕ ಐಇಡಿ ಕಳುಹಿಸಿರುವುದು ತನಿಖೆ ವೇಳೆ ಗೊತ್ತಾಗಿದೆ.
https://twitter.com/ANI/status/1621047745065934850?ref_src=twsrc%5Etfw%7Ctwcamp%5Etweetembed%7Ctwterm%5E1621051103621304320%7Ctwgr%5Ea5b14f05a27de27f7daf69a6d2e8a7aac3f734e6%7Ctwcon%5Es2_&ref_url=https%3A%2F%2Fwww.opindia.com%2F2023%2F02%2Fjammu-and-kashmir-let-terrorist-arrested-with-perfume-bottle-ied%2F