ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಸಂಭ್ರಮ ಮನೆ ಮಾಡಿದ್ದು, ಭಕ್ತರು ಎಲ್ಲೆಡೆ ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿಸಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಮನೆಯಲ್ಲಿ ಬಾಲ ರಾಮನ ಮೂರ್ತಿಗೆ ದೀಪ ಬೆಳಗಿ ಪೂಜೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲರಾಮನ ಮೂರ್ತಿಗೆ ದೀಪ ಬೆಳಗಿಸಿ ರಾಮನ ಗುಣ ಮಾಡಿದ್ದಾರೆ.
ಅವನ ತೋಳುಗಳೇ ನಮ್ಮ ಬಲ, ಅವನ ಎದೆಯೇ ನಮ್ಮ ಮಹತ್ವಾಕಾಂಕ್ಷೆ, ಅವನ ಕೈಗಳು ನಮ್ಮ ಶೌರ್ಯ,
ಅವನ ಪಾದ ನಮ್ಮ ಪಾಲಿಗೆ ಮೋಕ್ಷ, ಅವನ ರೂಪದಲ್ಲಿ, ಎಲ್ಲಾ ಸೃಷ್ಟಿಯ ಸಾರವಿದೆ.ಎಲ್ಲವೂ ಇಲ್ಲಿಂದಲೇ ಆರಂಭವಾಗುತ್ತದೆ. ಇಲ್ಲಿಂದಲೇ ನಮ್ಮ ಏಳಿಗೆ ಶುರು, 500 ವರ್ಷಗಳ ಅಂಧಕಾರದ ಬಳಿಕ ಒಂದು ರಾಷ್ಟ್ರದ ಪ್ರಾಣಪ್ರತಿಷ್ಠೆಯಾಗಿದೆ, ದೇಶದ ಜನರ ಪ್ರಾಣಪ್ರತಿಷ್ಠೆಯಾಗಿದೆ- ಜೈಶ್ರೀರಾಂ ಎಂದು ಸುದೀಪ್ ಟ್ವೀಟ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
https://twitter.com/KicchaSudeep/status/1749328271001702519?ref_src=twsrc%5Etfw%7Ctwcamp%5Etweetembed%7Ctwterm%5E1749328271001702519%7Ctwgr%5E2c627c4b4f91102ed260786f7c987f4202ce81ab%7Ctwcon%5Es1_&ref_url=https%3A%2F%2Fvistaranews.com%2Fayodhya-ram-mandir%2Frama-mandir-its-pranaprathishta-of-nation-and-its-people-says-kichcha-sudeep%2F562287.html