20 ವರ್ಷದವರಿದ್ದಾಗಲೇ ಜಗ್ಗೇಶ್ ಬಳಿ ಇತ್ತು ಹುಲಿ ಉಗುರು; ‘ನವರಸ ನಾಯಕ’ ನ ಸಂದರ್ಶನದ ಹಳೆ ವಿಡಿಯೋ ವೈರಲ್

‘ಹುಲಿ ಉಗುರು’ ಇರುವ ಚೈನ್ ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಈ ಕಾರಣಕ್ಕಾಗಿಯೇ ಬಂಧನಕ್ಕೊಳಗಾಗಿದ್ದು, ಅವರನ್ನು ಬಿಗ್ ಬಾಸ್ ಮನೆಯಿಂದಲೇ ವಶಕ್ಕೆ ಪಡೆದು ಈಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅವರ ಬಂಧನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಉಗುರು ಧರಿಸಿರುವ ಹಾಗೂ ಹುಲಿ, ಚಿರತೆ ಚರ್ಮದ ಮೇಲೆ ಕುಳಿತಿರುವ ಗಣ್ಯರ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನಯ್ ಗುರೂಜಿ ಅವರುಗಳ ವಿರುದ್ಧ ದೂರನ್ನು ಸಹ ದಾಖಲಿಸಲಾಗಿದೆ.

ಇವರ ಮಧ್ಯೆ ನಟ ಜಗ್ಗೇಶ್ ಅವರ ಹಳೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ 20ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ತಾಯಿ, ಒರಿಜಿನಲ್ ಹುಲಿ ಉಗುರು ಇರುವ ಚಿನ್ನದ ಸರ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಇದನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಜಗ್ಗೇಶ್ ಅವರ ವಿಚಾರಣೆ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read